
ಪ್ರಗತಿವಾಹಿನಿ ಸುದ್ದಿ; ವಿಜಯನಗರ: ರೈತರೊಬ್ಬರಿಗೆ ಎಸ್ ಬಿಐ ವ್ಯವಸ್ಥಾಪಕರೊಬ್ಬರು ಕಿರುಕುಳ ನೀಡಿದ್ದಕ್ಕೆ ಬ್ಯಾಂಕ್ ನಲ್ಲಿಯೇ ಆತ್ಮಹತ್ಯೆಗೆ ಮುಂದಾದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ.
ಸಹೋದರಿಯ 36 ಗ್ರಾಂ ಚಿನ್ನವನ್ನು ಎಸ್ ಬಿಐ ಬ್ಯಾಂಕ್ ನಲ್ಲಿ ಅಡವಿಟ್ಟು 2021ರ ಮೇ ನಲ್ಲಿ 92 ಸಾವಿರ ರೂಪಾಯಿ ಸಾಲ ಪಡೆದಿದ್ದ ರೈತ ತಮ್ಮಣ್ಣನವರ ಯಲ್ಲಪ್ಪ, ಬ್ಯಾಂಕ್ ವ್ಯವಸ್ಥಾಪಕರ ಕಿರಿಕಿರಿಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಚಿನ್ನ ಅಡವಟ್ಟು 92 ಸಾವಿರ ರೂಪಾಯಿ ಸಾಲ ಪಡೆದಿದ್ದೆ. ಕಳೆದ ತಿಂಗಳು ಕಬ್ಬಿನ ಹಣ ಬ್ಯಾಂಕ್ ನಲ್ಲಿರುವ ಉಳಿತಾಯ ಖಾತೆಗೆ ಜಮಾವಣೆಗೊಂಡಿತ್ತು. ಅದರಲ್ಲಿ ವಹಿವಾಟು ನಡೆಸಿ ಚಿನ್ನ ಬಿಡಿಸಿಕೊಳ್ಳಲೆಂದು 1 ಲಕ್ಷ 35 ಸಾವಿರ ರೂಪಾಯಿ ಹಣವನ್ನು ಖಾತೆಯಲ್ಲಿ ಉಳಿಸಿ ಕಳೆದ ಮಾರ್ಚ್ 11ರಂದು ಬ್ಯಾಂಕಿಗೆ ಬಂದು ಲೆಕ್ಕ ಮಾಡಿಸಿದಾಗ, ಅಸಲು ಬಡ್ಡಿ ಸೇರಿ 98,885 ರೂಪಾಯಿ ಹಣ ಕಟ್ಟಬೇಕು ಎಂದರು. ನನ್ನ ಉಳಿತಾಯ ಖಾತೆಯಲ್ಲಿ ಹಣವಿದ್ದುದರಿಂದ ಅದನ್ನು ಸಾಲಕ್ಕೆ ಹಾಕಿಕೊಂಡು ಚಿನ್ನ ಬಿಟ್ಟುಕೊಡಬೇಕೆಂದು ವ್ಯವಸ್ಥಾಪಕರಲ್ಲಿ ವಿನಂತಿಸಿದೆ. ಆದರೆ ವ್ಯವಸ್ಥಾಪಕರು 1 ಲಕ್ಷ ರೂಪಾಯಿ ಹೋಲ್ಡ್ ಮಾಡಿಕೊಂಡಿದ್ದು ಅಲ್ಲದೇ ಒಂದು ವಾರದಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಊಟವಿಲ್ಲದೇ ಕೂಡಿಸಿಕೊಂಡು ಸತಾಯಿಸುತ್ತಿದ್ದಾರೆ. ಈಗ 25 ಸಾವಿರ ರುಪಾಯಿ ಇನ್ಶೂರೆನ್ಸ್ ಮಾಡಿಸಿದರೆ ಚಿನ್ನ ಬಿಟ್ಟು ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ರೈತರಿಗೆ ಹಣ ಮರುಪಾವತಿ ಮಾಡುವುದು ಕಷ್ಟವಿರುವಾಗ ಈ ರೀತಿ ಬ್ಯಾಂಕಿಗೆ ಅಲೆದಾಡಿಸುತ್ತಿರುವುದೂ ಅಲ್ಲದೇ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ಈಗ ಇನ್ಶುರೆನ್ಸ್ ಗೆ 25 ಸಾವಿರ ಕೊಟ್ಟರೆ ಚಿನ್ನ ಬಿಡಿಸಿಕೊಳ್ಳಬಹುದು ಎಂದು ಹೇಳುತ್ತಿರುವುದು ಯಾವ ನ್ಯಾಯ? ಕಿರುಕುಳಕ್ಕೆ ಬೇಸತ್ತು ಬ್ಯಾಂಕ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಬ್ಯಾಂಕ್ ವ್ಯವಸ್ಥಾಪಕರೇ ಕಾರಣ ಎಂದು ವಿಷಕುಡಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ತಕ್ಷಣ ಗ್ರಾಹಕರು ರೈತನನ್ನು ತಡೆದು ರಕ್ಷಿಸಿದ್ದಾರೆ.
ಮುಸ್ಕಾನ್ ಳನ್ನು ಶ್ಲಾಘಿಸಿ ಸಾಹಿತ್ಯ ಬರೆದ ಮೋಸ್ಟ್ ವಾಂಟೆಡ್ ಉಗ್ರ