*ಹಳ್ಳದಂತಾದ ರಸ್ತೆ ಮೇಲೆ ಶಾಲಾ ಮಕ್ಕಳ ಓಡಾಟ; ಶಾಸಕರ ವಿರುದ್ಧ ಗ್ರಾಮಸ್ಥರ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಗವಾಡ ಶಾಸಕ ರಾಜು ಕಾಗೆ ಕ್ಷೇತ್ರದಲ್ಲಿ ಹರಿಯುವ ನೀರಿನಲ್ಲಿ ಶಾಲೆಗೆ ತೆರಳಲು ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಮೂಲಭೂತ ಸೌಕರ್ಯವಿಲ್ಲದೆ ರಸ್ತೆಗಳು ಹಳ್ಳದಂತಾಗಿವೆ. ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದ ವಾಲ್ಮೀಕಿ ನಗರದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಮಳೆಯಿಂದಾಗಿ ರಸ್ತೆ ಮಾರ್ಗದಲ್ಲೇ ನೀರು ನಿಲ್ಲುತ್ತಿದ್ದು, ಸಂಚಾರಕ್ಕೂ ಸಂಕಷ್ಟ ಎದುರಾಗಿದೆ. ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಹಲವುಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗಾರ ಖುರ್ದ ಗ್ರಾಮಸ್ಥ ಮಾತನಾಡಿ ಉಗಾರ ಖುರ್ದ ದಿಂದ 2 ಕಿ.ಮಿ ದೂರದಲ್ಲಿ ವಾಲ್ಮೀಕಿ ನಗರವಿದೆ. ಹಲವಾರು ವರ್ಷಗಳಿಂದ ರಸ್ತೆ ಮಾಡಲು ಮನವಿ ಸಲ್ಲಿಸಿದರು, ಶಾಸಕರು ಹಾಗೂ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದಾರೆ. ಜನರಿಗೆ ರಸ್ತೆ ನಿರ್ಮಾಣ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಶಾಸಕ ರಾಜು ಕಾಗೆ ಕಚೇರಿ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ