Kannada NewsKarnataka NewsLatest

20 ವರ್ಷದಿಂದ ಅನಧಿಕೃತವಾಗಿದ್ದ ದಾಬಾ ಸೀಜ್ ಮಾಡಿದ ರೇಷ್ಮಾ ತಾಳಿಕೋಟೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ತಾಲೂಕಿನ ಶಿಪ್ಪೂರ ಗ್ರಾಮದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅನಧಿಕೃತವಾಗಿ ಜಮೀನಿನಲ್ಲಿ ದಾಭಾ ನಿರ್ಮಿಸಿ ವ್ಯವಹಾರ ಮಾಡುತ್ತಿರುವ ದಾಬಾಗಳ ಮೇಲೆ ಹುಕ್ಕೇರಿ ತಹಶೀಲ್ದಾರ ರೇಷ್ಮಾ ತಾಳಿಕೋಟಿ ದಾಬಾ ವಶಪಡಿಸಿಕೊಂಡು ಬೀಗ ಹಾಕಿದ್ದಾರೆ.
ಅಣ್ಣಾಸಾಹೇಬ ಹವಲೆ ಎಂಬುವರ ಮಾಲಿಕತ್ವದ ಜಮೀನದಲ್ಲಿ ಅನಧಿಕೃತವಾಗಿ ಕಾವೇರಿ ಹಾಗೂ ಗೋವಾವೆಸ್ಸ್ ಎಂಬ ಹೆಸರಿನ ದಾಬಾಗಳು ಕಳೆದ ೨೦ ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದವು. ಆದರೆ ಇವೆರಡು ದಾಬಾಗಳ ಮಾಲೀಕರು ಸರಕಾರಕ್ಕೆ ಯಾವುದೇ ಕರ ಪಾವತಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುವ ನೂರಾರು ವಾಹನಗಳು ಇಲ್ಲಿ ಉಪಹಾರಕ್ಕೆ (ಊಟಕ್ಕೆ) ನಿಂತು ಹೋಗುತ್ತಿದ್ದವು. ವಾಹನ ಪಾರ್ಕಿಂಗ್, ಚಾಲಕರಿಗೆ ಸ್ನಾನ ಸೇರಿದಂತೆ ಹಲವಾರು ಪ್ರಯಾಣಿಕರಿಗೆ ಅನೂಕೂಲವಾಗುವಂತೆ ಹೈಟೇಕ್ ವ್ಯವಸ್ಥೆ ಮಾಡಿರುವುದರಿಂದ ಪ್ರತಿ ತಿಂಗಳಿಗೆ ಕೊಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Related Articles

Back to top button