School News: ಶಿಕ್ಷಕರಿಗೆ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಗಳು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮೇ 29ರಿಂದ ಶಾಲೆಗಳ ಆರಂಭ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಬುಧವಾರ ನಡೆಸಿದ ವಿಡೀಯೋ ಸಂವಾದದ ಮುಖ್ಯಾಂಶಗಳು:-
1) 29/05/2023 ರಂದು ಶಾಲೆಯ ಶಿಕ್ಷಕರು ಹಾಜರಿರುವುದು.
2) ಶಾಲೆ ಕೊಠಡಿಗಳು, ಆವರಣ, ಅಡುಗೆ ಕೋಣೆ, ಅಡುಗೆ ಪಾತ್ರೆಗಳು, ಅಹಾರ ಧಾನ್ಯಗಳು, ನೀರಿನ ಸಂಪ್ ಇತ್ಯಾದಿಗಳನ್ನು ಕಡ್ಡಾಯವಾಗಿ ಸ್ವಚ್ಛ ಗೊಳಿಸುವುದು.
3) ತರಗತಿ, ಶಾಲಾ ವೇಳಾಪಟ್ಟಿಗಳನ್ನು ಕಡ್ಡಾಯವಾಗಿ ಸಿದ್ದಗೊಳಿಸಿಕೊಳ್ಳುವುದು.
4) ಶಾಲಾ SDP, SAP ಸಿದ್ದಗೊಳಿಸಿಕೊಳ್ಳುವುದು.
5) 2023-24 ನೇ ಸಾಲಿನ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ದಿ:30/05/2023 ರೊಳಗೆ ಮಕ್ಕಳಿಗೆ ಕಡ್ಡಾಯವಾಗಿ ವಿತರಣೆ ಮಾಡಿ, ದಾಖಲೀಕರಿಸುವುದು.
6) 29/05/2023 ರಿಂದ ಕಡ್ಡಾಯವಾಗಿ ಶಿಕ್ಷಕರ ಹಾಗೂ ಮಕ್ಕಳ ಹಾಜರಾತಿಯನ್ನು ನಿರ್ವಹಿಸುವುದು.
7) 2023-24 ನೇ ಸಾಲಿಗೆ ವಿತರಣೆ ಮಾಡಿರುವ ಪಠ್ಯಪುಸ್ತಕಗಳನ್ನು sts ಕಡ್ಡಾಯವಾಗಿ ಸ್ವೀಕರಿಸಿ, Acknowledgement ನೀಡುವುದು.
8) ಉಳಿಕೆ ಇರುವ ಮಕ್ಕಳ ಆಧಾರ್ verification ಕಡ್ಡಾಯವಾಗಿ ಮಾಡಲು ಕ್ರಮವಹಿಸುವುದು.
9) ದಿನಾಂಕ: 01/06/2023 ರಿಂದ 2023-24 ಸಾಲಿನ ಪಾಠ ಪ್ರವಚನಗಳನ್ನು ಪ್ರಾರಂಭ ಮಾಡುವುದು.
10) ದಿನಾಂಕ :01/06/2023 ರಿಂದ 18/07/2023 ರವರೆಗೆ 40 ದಿನಗಳ ಒಂದನೇ ತರಗತಿಗೆ ವಿದ್ಯಾ ಪ್ರವೇಶ ಚಟುವಟಿಕೆಗಳನ್ನು ಮಾಡಿ, ದಾಖಲೀಕರಿಸುವುದು.
11) ಉಳಿದ ಸೇತುಬಂಧ ಕಾರ್ಯಕ್ರಮ ( ಪೂರ್ವ ಪರೀಕ್ಷೆ -ತರಗತಿವಾರು ಬುನಾದಿ ಕಲಿಕಾ ಫಲಗಳ ಆಧಾರಿತವಾಗಿ) ಪರಿಹಾರ ಬೋಧನೆ, ಸಾಫಲ್ಯ ಪರೀಕ್ಷೆ) ದಾಖಲೀಕರಣ.
12) ಸರಳ ದಿನಚರಿ ನಿರ್ವಹಣೆ
13) ದಾಖಲಾತಿ, ದಾಖಲಾತಿ ಆಂದೋಲನ ಕ್ರಮಕೈಗೊಳ್ಳುವುದು.
14) ನಿರುಪಯುಕ್ತ ವಸ್ತುಗಳ ಕಡ್ಡಾಯವಾಗಿ ವಿಲೇವಾರಿಗೆ ಕ್ರಮವಹಿಸುವುದು.
15)Admission with promotion ಮೂಲಕ ಮುಂದಿನ ತರಗತಿಗಳಿಗೆ ಕಡ್ಡಾಯವಾಗಿ ದಾಖಲು ಮಾಡಿಕೊಳ್ಳುವುದು.
16) 01/06/2023 ರಿಂದ 15/06/2023 ರವರೆಗೆ ಅನುಷ್ಠಾನ ಅಧಿಕಾರಿಗಳ ಮಿಂಚಿನ ಸಂಚಾರ ಪ್ರತಿ ಶಾಲೆಯ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಸದರಿ ದಿನಗಳಲ್ಲಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಿದ್ದು ಕೇಳಿದ ದಾಖಲೆಗಳನ್ನು ಸಭ್ಯ ವರ್ತನೆ ಮೂಲಕ ತೋರಿಸಲು ಕ್ರಮವಹಿಸುವುದು.
16) ಶಾಲಾ ಪ್ರಾರಂಭದ ದಿನವೇ ಸಿಹಿಯೊಂದಿಗೆ ಬಿಸಿಯೂಟ ಪ್ರಾರಂಭ ಮಾಡುವುದು.

ವಿದ್ಯಾ ಪ್ರವೇಶ ಹೊಸ ಯೋಜನೆ! ಈ ಸಲ ಮಳೆಬಿಲ್ಲು, ಕಲಿಕಾ ಚೇತರಿಕೆ ಇಲ್ಲ! 5, 8 classes ಗೆ Board exam!

https://pragati.taskdun.com/u-t-khadarcm-siddaramaiahclp-meeting/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button