Latest

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ನಾಗೇಶ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಇಂದಿನಿಂದ 9-12 ನೇ ತರಗತಿವರೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು, ಭೌತಿಕ ತರಗತಿಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶುಭ ಸುದ್ದಿ ನೀಡಿದ್ದಾರೆ.

ವಲಸೆ ಹೋದ ಹಾಗೂ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಹತ್ತಿರದ ಶಾಲೆಗಳಿಗೆ ಹೋಗಿ ಪಾಠ ಕೇಳಬಹುದು ಎಂದು ಸಲಹೆ ನೀಡಿದ್ದಾರೆ.

ಕೊರೊನಾ ಸಂಕಷ್ಟದಿಂದ ಹಲವರು ನಗರ ಹಾಗೂ ಊರುಗಳನ್ನು ತೊರೆದು ವಲಸೆ ಹೋದವರು ಅಥವಾ ಅನಿವಾರ್ಯವಾಗಿ ಬೇರೆ ಊರುಗಳಲ್ಲಿ ನೆಲೆ ನಿಂತವರು ಹತ್ತಿರದ ಯಾವುದೇ ಶಾಲೆಗಳಿಗೆ ತೆರಳಿ ಪಾಠ ಕೇಳಬಹುದು. ಶಾಲೆಗೆ ದಾಖಲಾತಿ ಆಗಿಲ್ಲವೆಂದಾಗಲಿ ಅಥವಾ ಬೇರೆ ಕಾರಣಕ್ಕಾಗಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button