Latest

ಶಾಲೆ ಆರಂಭ: ಒಂದು ಹೆಜ್ಜೆ ಮುಂದೆ ಇಟ್ಟ ರಾಜ್ಯ ಸರಕಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಶಾಲೆಗಳನ್ನು ಆರಂಭಿಸುವ ಕುರಿತಂತೆ ರಾಜ್ಯ ಸರಕಾರ ಇಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.

ಜನೆವರಿ 6ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಹಾಗೆಯೇ 6ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ ಕುಮಾರ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದರು.

ತರಗತಿಗಳ ಅವಧಿ ಮತ್ತಿತರ ವಿಷಯಗಳ ಕುರಿತು ಇಷ್ಟರಲ್ಲೇ ವಿವರ ನೀಡಲಾಗುವುದು. ವಿದ್ಯಾಗಮ ಖಾಸಗಿ ಶಾಲೆಗಳಲ್ಲಿ ಸಹ ಆರಂಭವಾಗಲಿದೆ. ಆದರೆ ವಿದ್ಯಾಗಮ ಶಾಲಾ ಆವರಣದಲ್ಲೇ ನಡೆಯಬೇಕು. ಇದಕ್ಕೆ ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಪಾಲಕರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಸುರೇಶ ಕುಮಾರ ತಿಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button