KLE 1099
Beereshwara 15
Home add(4th Anniversary)

ಲಿಫ್ಟ್ ನ ಡೋರ್ ಮಧ್ಯೆ ಸಿಲುಕಿ ಶಿಕ್ಷಕಿ ದಾರುಣ ಸಾವು

ಶಾಲಾ ಕಟ್ಟಡದಲ್ಲಿ ನಡೆದ ದುರ್ಘಟನೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಶಾಲೆಯ ಲಿಫ್ಟ್ ಡೋರ್ ಮಧ್ಯೆ ಸಿಲುಕಿ ಶಿಕ್ಷಕಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ಮುಂಬೈಯ ಮಲಾದ್ ಸೆಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಈ ದುರ್ಘಟನೆ ನಡೆದಿದೆ. ಜೆನೆಲ್ ಫೆರ್ನಾಂಡಿಸ್(26) ಮೃತಪಟ್ಟ ಶಿಕ್ಷಕಿ. ಅವರು 6ನೇ ಮಹಡಿಯಿಂದ ಎರಡನೇ ಮಹಡಿಯಲ್ಲಿರುವ ಸ್ಟಾಫ್ ರೂಮ್ ಗೆ   ಬರುತ್ತಿದ್ದ ವೇಳೆ ಲಿಫ್ಟ್ ಬಳಕೆಗೆ ಮುಂದಾಗಿದ್ದಾರೆ. ಆದರೆ ಅವರ ಲಿಫ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಲಿಫ್ಟ್ ನ ಬಾಗುಲುಗಳು ಮುಚ್ಚಿಕೊಂಡು ಅದರ ಮಧ್ಯೆ ಸಿಲುಕಿ ತೀವ್ರ ಗಾಯಗೊಂಡಿದ್ದಾರೆ.

ಜೆನೆಲ್ ಅವರನ್ನು ರಕ್ಷಿಸಲು ಶಾಲಾ ಸಿಬ್ಬಂದಿ ಶತಪ್ರಯತ್ನಗಳನ್ನು ಮಾಡಿದ್ದರೂ  ಗಂಭೀರವಾಗಿ ಗಾಯಗೊಂಡಿದ್ದ ಅವರು ಬದುಕಿ ಉಳಿಯಲಿಲ್ಲ.

ತುರ್ತು ನಿರ್ವಹಣಾ ಕಾರ್ಯ: ಸೆ18,19 ರಂದು ವಿದ್ಯುತ್ ವ್ಯತ್ಯಯ

You cannot copy content of this page