
ಶಾಲಾ ವಾಹನ ಶುಲ್ಕವೂ ಹೆಚ್ಚಳ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ಹೆಚ್ಚುತ್ತಿದೆ. ಇದೀಗ ಶಾಲಾ ಶುಲ್ಕದ ಬೆನ್ನಲ್ಲೇ ಶಾಲಾ ವಾಹನ ಶುಲ್ಕ ಏರಿಸಲು ಖಾಸಗಿ ಶಾಲಾ ವಾಹನಗಳ ಸಂಘಟನೆ ಮುಂದಾಗಿದೆ.
ರಾಜ್ಯದಲ್ಲಿ ಕೆಲ ಖಾಸಗಿ ಶಾಲೆಗಳು ಶೇ.15ರಿಂದ ಶೇ 20ರಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಶಾಲಾ ವಾಹನಗಳ ದರವೂ ಏರಿಕೆಯಾಗಲಿವೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ವಿದ್ಯಾರ್ಥಿಗಳಿಗೆ 500 ರೂ ನಿಂದ 600 ರೂ ಹೊರೆಯಾಗಲಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿರುವುದರಿಂದ ಶಾಲಾ ವಾಹನಗಳ ಶುಲ್ಕ ಹೆಚ್ಚಳ ಮಾಡಲು ಖಾಸಗಿ ಶಾಲಾ ವಾಹನಗಳ ಸಂಘಟನೆ ಮುಂದಾಗಿದೆ ಎನ್ನಲಾಗಿದೆ.