ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್ (health tips)
ಮಾನವನ ದೇಹದಲ್ಲಿ ಶೇ.೬೦ರಷ್ಟು ನೀರಿದೆ. ನೀರಿನ ಅಂಶ ಸ್ವಲ್ಪ ಕಡಿಮೆಯಾದರೂ ಅಸ್ವಸ್ಥತೆ, ಅನಾರೋಗ್ಯ ಕಾಡಬಹುದು. ಶೇ.೨ರಷ್ಟು ನೀರಿನ ಪ್ರಮಾಣ ಕಡಿಮೆಯಾದರೂ ಮನುಷ್ಯ ಆರೋಗ್ಯದಿಂದ ಇರಲಾರ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಅಂಶ.
ಹಾಗಾದರೆ ನಾವು ಪ್ರತಿ ದಿನ ಎಷ್ಟು ನೀರು ಕುಡಿಯಬೇಕು ? ನಿಯಮಿತವಾಗಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನವೇನು ? ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ.
ಆರೋಗ್ಯವಂತ ವಯಸ್ಕ ವ್ಯಕ್ತಿ ಒಂದು ಸಲಕ್ಕೆ ೮ ಔನ್ಸ್ (೨೩೭ ಮಿಲೀ)ನಂತೆ ಪ್ರತಿ ದಿನ ೮ ಸಲ ನೀರು ಕುಡಿಯುವುದು (ಸುಮಾರು ೨ ಲೀ.) ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ವೈಜ್ಞಾನಿಕ ಅಧ್ಯಯನದಲ್ಲಿ ದೃಢಪಟ್ಟಿವೆ. ಅಂತೆಯೇ ವ್ಯಕ್ತಿಯ ಆರೋಗ್ಯ, ವಾಸಿಸುತ್ತಿರುವ ಸ್ಥಳ, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದು ಮೊದಲಾದ ಸನ್ನಿವೇಶಗಳಲ್ಲಿ ನೀರು ಕುಡಿಯಬೇಕಾದ ಪ್ರಮಾಣ ವ್ಯತ್ಯಾಸ ಆಗಬಹುದು.
ಇನ್ನು, ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಅದರಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಿರುವ ಪ್ರಮುಖ ಏಳು ಪ್ರಯೋಜನಗಳು ಇಂತಿವೆ.
೧. ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ (ನಿರ್ಜಲೀಕರಣ) ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತದೆ. ಅದರಲ್ಲೂ ತೀವ್ರವಾದ ವ್ಯಾಯಾಮ ಅಥವಾ ಹೆಚ್ಚಿನ ಉಷ್ಣತೆಯ ಸಮಯದಲ್ಲಿ ದೇಹ ಡಿಹೈಡ್ರೇಟೆಡ್ ಆಗದಂತೆ ತಡೆಯಲು ನೀರು ಸಹಕಾರಿ. ದೇಹದಲ್ಲಿ ನೀರಿನ ಅಂಶ ಶೇ.೨ರಷ್ಟು ಕಡಿಮೆಯಾದರೂ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
೨. ಮೆದುಳುನ್ನು ಚುರುಕಾಗಿಡಲು ಸಹಕಾರಿ
ಮನುಷ್ಯರ ಮೆದುಳಿನ ಕಾರ್ಯಕ್ಷಮತೆ ದೇಹದಲ್ಲಿನ ನೀರಿನ ಪ್ರಮಾಣದಿಂದ ಬಲವಾಗಿ ಪ್ರಭಾವಿತವಾಗಿರುತ್ತದೆ.
ದೇಹದ ತೂಕದ ಶೇ. ೧-೩% ರಷ್ಟು ನಿರ್ಜಲೀಕರಣವು ಮೆದುಳಿನ ಕಾರ್ಯಚಟುವಟಿಕೆಯ ಹಲವು ಅಂಶಗಳನ್ನು ದುರ್ಬಲಗೊಳಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಏಕಾಗ್ರತೆಯನ್ನು ದುರ್ಬಲಗೊಳಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಲ್ಲದೇ ತಲೆ ನೋವಿನ ಹೆಚ್ಚಳಕ್ಕೂ ಕಾರಣವಾಗುತ್ತದೆ. ಆತಂಕ (anxiety ) ಮತ್ತು ಆಯಾಸ (fatigue ) ಹೆಚ್ಚಾಗುತ್ತದೆ.
೩) ತಲೆನೋವು ತಡೆಗಟ್ಟಲು ಸಹಕಾರಿ
ನಿರ್ಜಲೀಕರಣವು (ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದು) ಕೆಲವರಲ್ಲಿ ತಲೆನೋವು ಮತ್ತು ಮೈಗ್ರೇನ್ ಅನ್ನು ಪ್ರಚೋದಿಸಬಹುದು. ತಲೆನೋವು ನಿರ್ಜಲೀಕರಣದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಸಂಶೋಧನೆ ತೋರಿಸಿದೆ. ಪದೇ ಪದೇ ತಲೆನೋವು ಅನುಭವಿಸುವವರಲ್ಲಿ ನೀರು ಕುಡಿಯುವುದರಿಂದ ತಲೆನೋವು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.
೪) ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ
ಮಲಬದ್ಧತೆ ಹೆಚ್ಚಿನ ಜನರಲ್ಲಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಮಲಬದ್ಧತೆಯನ್ನು ನಿವಾರಿಸಲು ದ್ರವಾಹಾರ ಸೇವನೆಯನ್ನು ಹೆಚ್ಚಿಸುವ ಬಗ್ಗೆ ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಮಲಬದ್ಧತೆ ಇರುವವರಿಗೆ ಖನಿಜಯುಕ್ತ ನೀರು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
೫) ಮೂತ್ರಕೋಶದ ಕಲ್ಲುಗಳ (kidney stone) ಉಪಶಮನಕ್ಕೆ ಸಹಕಾರಿ
ಹೆಚ್ಚಿನ ದ್ರವ ಸೇವನೆಯು ಮೂತ್ರಪಿಂಡಗಳ ಮೂಲಕ ಹಾದುಹೋಗುವ ಮೂತ್ರದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು, ಮೂತ್ರಕೋಶದಲ್ಲಿ ಖನಿಜಗಳ ಸಾಂದ್ರತೆಯನ್ನು ದುರ್ಬಲಗೊಳಿಸುತ್ತದೆ, ಇದು ಖನಿಜದ ಅಂಶ ಮೂತ್ರಕೋಶದಲ್ಲಿ ಕಲ್ಲಾಗಿ ಮಾರ್ಪಡುವ ಪ್ರಕ್ರಿಯೆಯನ್ನು ತಡೆಯುತ್ತದೆ.
೬) ಹ್ಯಾಂಗೊವರ್ ತೊಂದರೆಯನ್ನು ಕಡಿಮೆ ಮಾಡುತ್ತದೆ
ಹ್ಯಾಂಗ್ ಓವರ್ ಎಂದರೆ ಆಲ್ಕೊಹಾಲ್ ಸೇವಿಸಿದ ನಂತರ ಅನುಭವಿಸುವ ಅಹಿತಕರ ಲಕ್ಷಣವಾಗಿದೆ. ಹ್ಯಾಂಗೋವರ್ ಸಂಭವಿಸಲು ಪ್ರಮುಖ ಕಾರಣವೆಂದರೆ ಆಲ್ಕೋಹಾಲ್ ಮೂತ್ರವರ್ಧಕವಾಗಿರುವುದು. ಆದ್ದರಿಂದ ಒಬ್ಬ ವ್ಯಕ್ತಿ ಆಲ್ಕೋಹಾಲ್ ಸೇವಿಸಿದ ಬಳಿಕ ಸೇವಿಸಿದ ನೀರಿನ ಪ್ರಮಾಣಕ್ಕಿಂತ ಹೆಚ್ಚು ಮೂತ್ರದ ಮೂಲಕ ಕಳೆದುಕೊಳ್ಳುತ್ತಾನೆ. ಇದರಿಂದ ಡಿ ಹೈಡ್ರೇಶನ್ (ನಿರ್ಜಲೀಕರಣ) ಉಂಟಾಗುತ್ತದೆ. ಡಿ ಹೈಡ್ರೇಶನ್ ಹ್ಯಾಂಗೊವರ್‌ಗೆ ಮುಖ್ಯ ಕಾರಣವಲ್ಲವಾದರೂ, ಬಾಯಾರಿಕೆ, ಆಯಾಸ, ತಲೆನೋವು ಮತ್ತು ಒಣ ಬಾಯಿಯಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ.
ಹ್ಯಾಂಗೊವರ್‌ಗಳನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಆಲ್ಕೋಹಾಲ್ ಸೇವನೆಯ ನಡುವೆ ಒಂದು ಲೋಟ ನೀರು ಕುಡಿಯುವುದು ಮತ್ತು ಮಲಗುವ ಮುನ್ನ ಕನಿಷ್ಠ ಒಂದು ದೊಡ್ಡ ಲೋಟ ನೀರು ಕುಡಿಯುವುದು.
೭) ತೂಕ ಕಳೆದುಕೊಳ್ಳಲು ಸಹಕಾರಿ
ನೀರು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಏಕೆಂದರೆ ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
ಊಟಕ್ಕಿಂತ ಅರ್ಧ ಗಂಟೆ ಮೊದಲು ೧೬.೯ ಔನ್ಸ್ (೦.೫ ಲೀಟರ್) ನೀರನ್ನು ಸೇವಿಸಿದವರು ೧೨ ವಾರಗಳ ಅವಧಿಯಲ್ಲಿ ಗಮನಾರ್ಹವಾಗಿ ದೇಹದ ತೂಕ ಕಳೆದುಕೊಂಡಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ.
(ಈ ಲೇಖನದ ಲಿಂಕ್ ನ್ನು ನಿಮ್ಮ ಎಲ್ಲ ಸ್ನೇಹಿತರಿಗೆ, ಬೇರೆ ಬೇರೆ ಗ್ರುಪ್ ಗಳಿಗೆ ಕಳಿಸಿ)
ಬೆಳಗಿನ ವಾಕಿಂಗ್‌ನ 13 ಅದ್ಭುತ ಪ್ರಯೋಜನಗಳು
https://pragati.taskdun.com/article/13-amazing-benefits-of-morning-walking/
https://pragati.taskdun.com/pragativahini-special/money-matter/there-is-no-need-of-good-time-for-the-savings-or-the-huge-sum/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ