Kannada NewsKarnataka NewsLatest

*ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ*: *ಎರಡನೇ ದಿನವೂ ಮಧ್ಯರಾತ್ರಿಯಿಂದಲೇ ಸರತಿ ಸಾಲು*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನದ ಎರಡನೇ ದಿನವೂ ಭಕ್ತರ ಸಾಗರವೇ ಹರಿದುಬಂದಿದೆ. ದೇವಿಯ ದರ್ಶನ ಪಡೆಯಲು ಮಧ್ಯರಾತ್ರಿಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ದೇವಿಯ ದರ್ಶನ ಆರಂಭವಾಗಿದೆ. 300 ರೂ. ವಿಶೇಷ ದರ್ಶನದ ಸಾಲಿನಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದಾರೆ. ಆದರೆ, 1,000 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದೆ.

ದೇವಾಲಯದ ಬಳಿ ಬೆಳಗ್ಗೆಯೇ ಆಗಮಿಸಿದ ಎಸ್‌ಪಿ ಶುಭನ್ವಿತಾ ಅವರು ಗರ್ಭಗುಡಿಯ ಸಮೀಪ ನಿಂತು ಭಕ್ತರ ದರ್ಶನ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಜನದಟ್ಟಣೆಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಹಾಸನಾಂಬೆ ಜಾತ್ರೆಯ ಮೊದಲ ದಿನವೂ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೊದಲ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದರು.

ಭಕ್ತಸಾಗರ ಕಂಡು ಪ್ರತಿಕ್ರಿಯಿಸಿದ್ದ ಸಚಿವ ಕೆ.ಎಂ. ಶಿವಲಿಂಗೇಗೌಡ, ಇದು ದೇವಿಯ ಪವಾಡ ಎಂದು ಹೇಳಿದ್ದರು. ಇದೀಗ ಎರಡನೇ ದಿನವೂ ಭಕ್ತರ ದಂಡು ಮುಂದುವರಿದಿದ್ದು, ಹಾಸನಾಂಬೆ ದರ್ಶನಕ್ಕೆ ಭಕ್ತರ ಉತ್ಸಾಹ ಹೆಚ್ಚಾಗಿದೆ.

Related Articles

Back to top button