ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಈಗಾಗಲೇ ಲಸಿಕೆ ಆರಂಭವಾಗಿದೆ. ಸದ್ಯದ ವ್ಯಾಕ್ಸಿನ್ ನನ್ನು ಕೈಗೆ ಹಾಕಲಾಗುತ್ತಿದೆ. ಶೀಘ್ರದಲ್ಲಿಯೇ ಮೂಗಿನ ಮೂಲಕ ನೀಡುವ ಲಸಿಕೆ ಕೂಡ ಆರಂಭವಾಗಲಿದೆ.
ಹೌದು. ಭಾರತ್ ಬಯೋಟೆಕ್ ಸಂಸ್ಥೆ ಇನ್ ಟ್ರಾನೇಸಲ್- ಮೂಗಿನ ಮೂಲಕ ನೀಡುವ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ ನ ಎಸ್ ಇಸಿ ಕಮಿಟಿ ಪ್ರಾಥಮಿಕ ಒಪ್ಪಿಗೆ ನೀಡಿದೆ. ಲಸಿಕೆಯ ಮೊದಲ ಹಂತದ ಪ್ರಯೋಗಕ್ಕೂ ಶಿಫಾರಸು ಮಾಡಿದೆ.
ಮೂಗಿನ ಮೂಲಕ ಹಾಕುವ ಲಸಿಕೆ ಪ್ರಯೋಗಕ್ಕೆ ಶಿಫಾರಸ್ಸು ಬೆನ್ನಲ್ಲೇ ಇದೀಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕೂಡ ಲಸಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ