Belagavi NewsBelgaum NewsElection NewsKannada NewsKarnataka NewsPolitics

ಮತಗಟ್ಟೆವಾರು ಇವಿಎಂ ಹಂಚಿಕೆ: ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ; ಎರಡನೇ ಹಂತದ ರ್‍ಯಾಂಡಮೈಜೇಷನ್ ಪೂರ್ಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭಾ ಚುನಾವಣೆಗಾಗಿ 02-ಬೆಳಗಾವಿ ಲೋಕಸಭೆ ಕ್ಷೇತ್ರದ ಮತಗಟ್ಟೆವಾರು ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ವಿಂಗಡಣೆಯನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎರಡನೇ ಹಂತದ ರ್‍ಯಾಂಡಮೈಜೇಷನ್ ಮೂಲಕ ನಿರ್ಧರಿಸಲಾಯಿತು.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಏ.23) ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.

ಈಗಾಗಲೇ ಮೊದಲ‌ ಹಂತದ ರ್‍ಯಾಂಡಮೈಜೇಷನ್ ಪೂರ್ಣಗೊಳಿಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಗಳಿಗೆ ಕಳಿಸಲಾಗಿದ್ಸು, ಎರಡನೇ ಹಂತದ ರ್‍ಯಾಂಡಮೈಜೇಷನ್ ಮೂಲಕ ಮತಗಟ್ಟೆವಾರು ಕಳಿಸಬೇಕಾದ ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳನ್ನು ವಿಂಗಡಿಸಲಾಯಿತು.

ರ್‍ಯಾಂಡಮೈಜೇಷನ್ ಪ್ರಕ್ರಿಯೆ ಬಳಿಕ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು, ಎರಡನೇ ಹಂತದ ರ್‍ಯಾಂಡಮೈಜೇಷನ್ ಮೂಲಕ ನಿರ್ಧರಿಸಲಾಗಿರುವ ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳನ್ನು ಮಸ್ಟರಿಂಗ್ ದಿನ ಮತಗಟ್ಟೆ ಅಧಿಕಾರಿಗಳ ತಂಡದ ಮೂಲಕ ಆಯಾ ಮತಗಟ್ಟೆಗಳಿಗೆ ಕಳಿಸಲಾಗುವುದು ಎಂದರು.

ಶೇ.130 ರಷ್ಟು ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್‌ ಮತ್ತು ವಿವಿಪ್ಯಾಟ್ ಗಳನ್ನು ರ್‍ಯಾಂಡಮೈಜೇಷನ್ ಮೂಲಕ ಅಂತಿಮಗೊಳಿಸಲಾಗುತ್ತದೆ. ಶೇ.100 ರಷ್ಟು ಮತಯಂತ್ರಗಳು ಮತಗಟ್ಟೆಗಳಿಗೆ ಕಳಿಸಲಾಗುತ್ತದೆ. ಹೆಚ್ಚುವರಿ ಇರುವ ಶೇ.30 ರಷ್ಟು ಮತಯಂತ್ರಗಳನ್ನು ಕಾಯ್ದಿರಿಸಲಾಗುತ್ತದೆ. ಮತಗಟ್ಟೆಗಳಿಗೆ ಕಳಿಸಲಾಗಿರುವ ಮತಯಂತ್ರಗಳಲ್ಲಿ ತಾಂತ್ರಿಕ‌ ದೋಷ ಕಂಡುಬಂದಲ್ಲಿ ಕಾಯ್ದಿರಿಸಲಾಗಿರುವ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮನೆ‌ ಮನೆಯಿಂದ ಮತಸಂಗ್ರಹ:

ಏ.25, 26 ಹಾಗೂ 27 ರಂದು ಮನೆ ಮನೆಗಳಿಗೆ ತೆರಳಿ ಮತಸಂಗ್ರಹ ನಡೆಯಲಿದೆ. ಈಗಾಗಲೇ ನಿಗದಿತ ನಮೂನೆ‌ ಭರ್ತಿ‌‌ಮಾಡುವ ಮೂಲಕ ಮನೆಯಿಂದ‌ ಮತ ಚಲಾವಣೆಗೆ ಒಪ್ಪಿಗೆ ನೀಡಿರುವ 85 ವರ್ಷ ಮೇಲ್ಪಟ್ಟವರು ಹಾಗೂ‌ ವಿಕಲಚೇತನರಿಂದ ಮತಸಂಗ್ರಹ ಮಾಡಲಾಗುವುದು ಎಂದು ಚುನಾವಣಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಮನೆ ಮನೆಗಳಿಗೆ ತೆರಳಿ‌ ಮತ ಸಂಗ್ರಹಿಸುವ ಸಂದರ್ಭದಲ್ಲಿ ರಾಯಕೀಯ ಪಕ್ಷಗಳ ಏಜೆಂಟರು ಉಪಸ್ಥಿತರಿರಬಹುದು. ಆದರೆ ಈ ಬಗ್ಗೆ ಆಯಾ ಪಕ್ಷ ಅಥವಾ ಅಭ್ಯರ್ಥಿಗಳು ಏಜೆಂಟರನ್ನು ನೇಮಿಸಿ ಮುಂಚಿತವಾಗಿ ತಿಳಿಸಬೇಕು ಎಂದರು.

ಸಾಮಾನ್ಯ ವೀಕ್ಷಕರಾದ ಎಂ.ಕೆ.ಅರವಿಂದ ಕುಮಾರ್, ಪೊಲೀಸ್ ವೀಕ್ಷಕರಾದ ಪವನ ಕುಮಾರ್, ವೆಚ್ಚ ವೀಕ್ಷಕರಾದ ಹರಕ್ರಿಪಾಲ್ ಖಟಾನಾ ಹಾಗೂ ನರಸಿಂಗರಾವ್ ಬಿ., ಪೊಲೀಸ್ ಆಯುಕ್ತರಾದ ಯಡಾ‌ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ‌ ರೋಹನ್ ಜಗದೀಶ್, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಉಪಸ್ಥಿತರಿದ್ದರು.

ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button