Latest

*ಪರೇಶ್ ಮೇಸ್ತಾ ಸಾವು ಪ್ರಕರಣ; ಕಾಗೇರಿ ಸೇರಿದಂತೆ 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ; ಕಾರವಾರ: ಪರೇಶ್ ಮೆಸ್ತಾ ಸಾವು ಪ್ರಕರಣದ ಬೆನ್ನಲ್ಲೇ ಭುಗಿಲೆದ್ದಿದ್ದ ಕೋಮು ಸಂಘರ್ಷ, ಗಲಾಟೆ ಪ್ರಕರಣದಲ್ಲಿ ಅಂದಿನ ಶಾಸಕ ವಿಶ್ವೇಷವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ವಿರುದ್ದ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೀನುಗಾರ ಕುಟುಂಬದ ಯುವಕ ಪರೇಶ್ ಮೆಸ್ತಾ 2017ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.ಪರೇಶ್ ಮೆಸ್ತಾನದ್ದು ಕೊಲೆ, ಸಹಜ ಸಾವಲ್ಲ ಎಂದು ಬಿಜೆಪಿ, ಬಜರಂಗದಳ ಕಾರ್ಯಕರ್ತರು ಆರೋಪಿಸಿ ಅಂದಿನ ಕಾಂಗ್ರೆಸ್ ಸರ್ಜಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಜಿಲ್ಲೆಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಶಿರಸಿಯಲ್ಲಿ ಅಂದು ನಡೆದ ಗಲಾಟೆಯಲ್ಲಿ ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು ಸೇರಿ ಹಲವರ ವಿರುದ್ಧ ಕೇಸ್ದಾಖಲಾಗಿತ್ತು.

ಈ ಹಿಂದೆ ರಾಜ್ಯ ಸರ್ಕಾರ 27 ಜನರ ವಿರುದ್ಧದ ಕೇಸ್ ವಾಪಸ್ ಪಡೆದಿತ್ತು. ಇದೀಗ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆದು ಆದೇಶ ಹೊರಡಿಸಿದೆ.

ಅಗ್ನಿವೀರ ಹುದ್ದೆಗಳಿಗೆ ಉಚಿತ ಪೂರ್ವಭಾವಿ ಪರೀಕ್ಷಾ ತರಬೇತಿ

https://pragati.taskdun.com/free-prelims-exam-training-for-firefighter-posts/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button