Latest

ಇದೇನೂ ಅಲ್ಲ, 2023ರ ನಂತರ ನನ್ನ ರಾಜಕೀಯ ನೋಡಿ

Home add -Advt

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎನ್ನುವ ಸುದ್ದಿಗೆ ಕುಮಾರಸ್ವಾಮಿ ತೀವ್ರ ಅಪ್ ಸೆಟ್ ಆಗಿದ್ದು, ನಾವು ಬದುಕಿರುವವರೆಗೂ ಅದು ಸಾಧ್ಯವಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2023ರಿಂದ ನಿಜವಾದ ರಾಜಕೀಯ ಆರಂಭಿಸುತ್ತೇನೆ. ಈವರೆಗಿಂದು ಸೀರಿಯಸ್ ರಾಜಕಾರಣ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಜೊತೆ ಮಾತ್ರವಲ್ಲ ಯಾವುದೇ ಪಕ್ಷದ ಜೊತೆಯೂ ಜೆಡಿಎಸ್ ವಿಲೀನ ಪ್ರಶ್ನೆ ಇಲ್ಲ. ನಾನು ಬದುಕಿರುವವರೆಗೂ ಯಾವುದೇ ಪಕ್ಷದ ಜೊತೆ ವಿಲೀನವಿಲ್ಲ. 2023ಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದೇ ನಮ್ಮ ಗುರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ನನ್ನ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಎಚ್ಚರದಿಂದ ಇರಬೇಕು. ನಾನು ಬಿಜೆಪಿ ಬಿ ಟೀಂ ಆಗಿದ್ದರೆ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡುತ್ತಿರಲಿಲ್ಲ. ಅಧಿಕಾರಕ್ಕಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡುವಾಗ ನನ್ನ ಹಣ ಖರ್ಚು ಮಾಡಿ ಮಾಡಿದ್ದೆ. ಸಿದ್ದರಾಮಯ್ಯ ನನ್ನ ಋಣದಲ್ಲಿದ್ದಾರೆ. ಅವರು ನನ್ನ ಬಗ್ಗೆ ಮಾತನಾಡಿದಷ್ಟೂ ನಾನು ಬಲಾಡ್ಯನಾಗುತ್ತೇನೆ ಎಂದು ಹೇಳಿದರು.

60 ವರ್ಷದ ರಾಜಕೀಯದಲ್ಲಿ ದೇವೇಗೌಡರು ಅಧಿಕಾರದಲ್ಲಿದ್ದದ್ದು ಕೇಅಲ 4-5 ವರ್ಷಗಳು ಮಾತ್ರ. ಯಾವ ಪಕ್ಷಕ್ಕೂ ದೇಶದಲ್ಲಿ ಸಿದ್ಧಾಂತಗಳಿಲ್ಲ. ಅಧಿಕಾರ ಹಿಡಿಯಲು ಎಲ್ಲ ಪಕ್ಷಗಳು ನೋಡುತ್ತಿರುತ್ತವೆ. ಕಾಂಗ್ರೆಸ್ ನ ಕೆಲ ನಾಯಕರಿಂದ ನನಗೆ ಹಿನ್ನಡೆಯಾಗಿದೆ. ಹೀಗಾಗಿ ನಾನು ಅನಿವಾರ್ಯವಾಗಿ ಕೆಲ ನಿರ್ಧಾರಗಲನ್ನು ತೆಗೆದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Related Articles

Back to top button