ಅಮ್ಮಾ….. ಕಂದಾ……. ಈ ವೀಡಿಯೋ ನೋಡಿದರೆ ನಿಮ್ಮ ಕರುಳು ಕಿತ್ತು ಬರುತ್ತೆ -ಕರುಣೆ ಇಲ್ಲದ ಕೊರೋನಾ
https://youtu.be/TA5kv8w5_SE
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ವಿಶ್ವವನ್ನೇ ಎಂತಹ ಸಂಕಷ್ಟಕ್ಕೆ ದೂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾವಿರ ಸಾವಿರ ಜನ ಪ್ರಣಾ ಕಳೆದುಕೊೆಡಿದ್ದರೆ, ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿ ಒದ್ದಾಡುತ್ತಿದ್ದಾರೆ.
ಇದೆಲ್ಲ ಒಂದು ಮುಖವಾದರೆ ಇಲ್ಲಿ ಅದರ ಇನ್ನೊಂದು ಮುಖವಿದೆ. ಈ ವೀಡಿಯೋ ನೋಡಿ ಇಲ್ಲಿರುವ ಕಂದಮ್ಮ ಅಮ್ಮಾ ಎಂದು ಅಳುವುದನ್ನು ನೋಡಿದರೆ, ಆ ಅಮ್ಮಾ ಅಲ್ಲೇ ಇದ್ದರೂ ಮಗುವನ್ನು ಮುದ್ದಿಸಲಾಗದೆ ಕಣ್ಣಿರು ಸುರಿಸುವುದನ್ನು ನೋಡಿದೆರ ನಿಮ್ಮ ಕರುಳೂ ಕಿತ್ತು ಬರುವುದರಲ್ಲಿ ಸಂದೇಹವಿಲ್ಲ.
ಬೆಳಗಾವಿ ಸಮೀಪದ ಹಲಗಾದ ಈ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. 7 ದಿನಗಳ ಕಾಲ ಇವರು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸಧ್ಯ ಅವರನ್ನು ಮಿಲನ್ ಹೊಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನು 14 ದಿನ ಮನೆಗೆ ಹೋಗುವಂತಿಲ್ಲ. ಅವರಿಗೆ ಪುಟ್ಟ ಮಗುವಿದೆ. ಆ ಮಗು ತಾಯಿಯನ್ನು ಕಾಣದೆ ದಿನವೂ ಕಣ್ಣೀರು ಹಾಕುತ್ತಿದ್ದಳು.
ಮಗುವಿನ ನೋವನ್ನು ನೋಡಲಾಗದೆ ಆಕೆಯ ಅಪ್ಪ ಬೈಕ್ ಮೇಲೆ ಕೂಡ್ರಿಸಿಕೊಂಡು ಬೆಳಗಾವಿಗೆ ಕರೆದುಕೊಂಡು ಬಂದಿದ್ದಾರೆ. ಮಿಲನ್ ಹೊಟೆಲ್ ಬಳಿ ಬಂದು ಅಮ್ಮನನ್ನು ಮಗುವಿಗೆ ತೋರಿಸಿ ಹೋಗೋಣ ಎಂದು ಕರೆ ತಂದಿದ್ದಾರೆ. ಆದರೆ ಅಮ್ಮನನ್ನು ನೋಡಿದ ಮಗು ಜೋರಾಗಿ ಅಮ್ಮಾ ಬಾ ಎಂದು ಕೂಗತೊಡಗಿದೆ. ಮಗುವನ್ನು ಕಂಡ ಅಮ್ಮನ ಕಣ್ಣೀರು ಮಾಸ್ಕ್ ಹಿಂದೆ ಕರಗಿ ಕರಗಿ ಹೋಗುತ್ತಿದೆ. ಅಲ್ಲಿನ ದೃಷ್ಯ ಎಂತವರನ್ನೂ ಹೃದಯವನ್ನೂ ಕರಗಿಸುವಂತಿತ್ತು.
ಮಗುವನ್ನು ಮುಟ್ಟಿದರೆ ಎಂತಹ ಅಪಾಯ ಬಂದೀತು ಎನ್ನುವ ಕಲ್ಪನೆಯಿದ್ದ ತಾಯಿ ಮಗುವನ್ನು ನೋಡಿ ದುಃಖ ತಡೆದುಕೊಳ್ಳಲಾಗದೆ ವಾಪಸ್ ಕರೆದುಕೊಂಡು ಹೋಗುವಂತೆ ಗಂಡನಿಗೆ ಕೈ ಸನ್ನೆ ಮಾಡುತ್ತಾಳೆ. ಮಗು ಮಾತ್ರ ಅಮ್ಮಾ ಬಾ ಎಂದು ಅಳುತ್ತಲೇ ಇದ್ದಳು.
ಕೊನೆಗೂ ಅಳುವ ಮಗುವನ್ನು ಅಪ್ಪ ವಾಪಸ್ ಕರೆದುಕೊಂಡು ಹೋದರು. ಅಮ್ಮ, ಮಗುವಿನ ಅಗಲುವಿಕೆಯ ದೃಷ್ಯ ಅಲ್ಲಿದ್ದವರಲ್ಲೆಲ್ಲ ಕಣ್ಣೀರು ಕೋಡಿ ಹರಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ