ಪ್ರಗತಿವಾಹಿನಿ ಸುದ್ದಿ, ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೀಮಾ ಲಾಟ್ಕರ್ ಅಧಿಕಾರ ಸ್ವೀಕರಿಸಿದ್ದು ಮೈಸೂರಿನ ‘ಮೊದಲ ಮಹಿಳಾ ಎಸ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೈಸೂರು ಜಿಲ್ಲೆಗೆ ಎಸ್ಪಿ ಹುದ್ದೆ ಸೃಷ್ಟಿಯಾದಾಗಿನಿಂದ, ಪುರುಷರೇ ಎಸ್ಪಿ ಹುದ್ದೆ ಅಲಂಕರಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಎಸ್ಪಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್ಪಿ) ಸ್ನೇಹ ಕಾರ್ಯನಿರ್ವಹಿಸಿ ತೆರಳಿದ್ದರು. ಈಗ ಎಎಸ್ಪಿ ಹುದ್ದೆಯಲ್ಲಿಯೂ ಮಹಿಳೆ (ಎಎಸ್ಪಿ ನಂದಿನಿ) ಇದ್ದಾರೆ.
ಎಸ್ಪಿ ಹಾಗೂ ಎಎಸ್ಪಿ ಹುದ್ದೆಯಲ್ಲಿ ಮಹಿಳೆಯರ ದರ್ಬಾರ್ ಬುಧವಾರದಿಂದ ಶುರುವಾಗಿದೆ. ನಿರ್ಗಮಿತ ಎಸ್ಪಿ ಆರ್. ಚೇತನ್ ಅವರು, ನೂತನ ಎಸ್ಪಿ ಸೀಮಾ ಲಾಟ್ಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
*ಅತಿಥಿ ಶಿಕ್ಷಕನಿಂದ ಹಲ್ಲೆ ಪ್ರಕರಣ; ಚಿಕಿತ್ಸೆ ಫಲಿಸದೇ ಸಹಶಿಕ್ಷಕಿ ಸಾವು*
https://pragati.taskdun.com/guest-teacherassaultlady-teacher-deathgadaga-govt-school/
*ಪಂಚಮಸಾಲಿ ಮೀಸಲಾತಿ ಬೃಹತ್ ಸಮಾವೇಶ ಪ್ರಾರಂಭ*
https://pragati.taskdun.com/panchamasali-padayatrehirebagewadibelagavi/
*ಈಶ್ವರಪ್ಪ, ಜಾರಕಿಹೊಳಿಗೆ ಸಿಎಂ ಹೇಳಿದ್ದೇನು? ಸಚಿವ ಸಂಪುಟ ವಿಸ್ತರಣೆ ಆಗುತ್ತಾ?*
https://pragati.taskdun.com/cabinet-extentioncm-basavaraj-bommaiclarification/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ