
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ವಾಪ್ತಿಯ ದುಂಡನಟ್ಟಿ ಗ್ರಾಮದ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ವೇಳೆ ದಾಳಿ ನಡೆಸಿರುವ ಪೊಲೀಸರು ಬೋಟು ಹಾಗೂ ಉಸುಕು ವಶಕ್ಕೆ ಪಡೆದು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿಗಳನ್ನಾಧಿರಿಸಿ ದಾಳಿ ನಡೆಸಿದ ಪೊಲೀಸ್ ತಂಡ 1 ಮರಳು ತೆಗೆಯುವ ಬೋಟು ಹಾಗೂ 2 ಬ್ರಾಸಿ ನಷ್ಟು ಮರಳು ವಶಕ್ಕೆ ಪಡೆಯಿತು.
ಇದೇ ವೇಳೆ ಆರೋಪಿತರಾದ ವಿಠ್ಠಲ ಮಾಳಗಿ, ಮಲ್ಲಿಕಾರ್ಜುನ ಮಾಳಗಿ ಮತ್ತು ಲಕ್ಷ್ಮಣ ಗೋವಿಂದಪ್ಪಗೋಳ ಅವರ ವಿರುದ್ಧ ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ