ಪ್ರಗತಿವಾಹಿನಿ ಸುದ್ದಿ, ಪಾಟ್ನಾ -ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಕಿಲೋ ಒಂದಕ್ಕೆ 100 ರೂ.ವರೆಗೆ ತಲುಪಿದೆ. ನಿತ್ಯ ಬಳಸುವ ಈರುಳ್ಳಿ ಬೆಲೆ ಏರಿದ್ದರಿಂದ ಜನ ತತ್ತರಿಸಿ ಹೋಗಿದ್ದಾರೆ.
ಆದರೆ ಬಿಹಾರದಲ್ಲಿ ಕಿಲೋ ಈರುಳ್ಳಿಗೆ 35 ರೂ. ಸಹಕಾರಿ ಸಂಸ್ಥೆಗಳ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದ್ದು, ಒಬ್ಬರಿಗೆ 2 ಕಿಲೋ ಮಾತ್ರ ವಿತರಿಸಲಾಗುತ್ತಿದೆ. ಇದಕ್ಕಾಗಿ ಜನರು ರಾತ್ರಿಯಿಂದಲೇ ಸಾಲು ಹಚ್ಚಿ ನಿಲುತ್ತಿದ್ದಾರೆ. ಮದುವೆಯಂತಹ ಕಾರ್ಯಕ್ರಮವಿದ್ದಲ್ಲಿ ಅದರ ಕಾರ್ಡ್ ತೋರಿಸಿದರೆ 25 ಕಿಲೋವರೆಗೆ ಈರುಳ್ಳಿ ಕೊಡಲಾಗುತ್ತದೆ.
ಜನರು ರಾತ್ರಿಯೆಲ್ಲ ಸಾಲು ಹಚ್ಚು ನಿಲ್ಲುವುದರಿಂದ ಗದ್ದಲ ಉಂಟಾಗಬಹುದೆಂದು ಸಿಬ್ಬಂದಿ ಹೆಲ್ಮೆಟ್ ಧರಿಸಿ ಮಾರಾಟ ಮಾಡುತ್ತಿದ್ದಾರೆ. ಕೆಲವೆಡೆ ಕಲ್ಲು ತೂರಾಟದಂತಹ ಘಟನೆಗಳೂ ನಡೆದಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಹೆಲ್ಮೆಟ್ ಧರಿಸಿದ್ದಾಗಿ ಸಿಬ್ಬಂದಿ ಹೇಳುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ