ಅಪಘಾನಿಸ್ತಾನ – ಆರ್ಥಿಕವಾಗಿ ಅತ್ಯಂತ ದುರ್ಬರ ಸ್ಥಿತಿ ಎದುರಿಸುತ್ತಿರುವ ಅಪಘಾನಿಸ್ತಾನದಲ್ಲಿ ಜನ ಬದುಕುವ ಸಲುವಾಗಿ ತಮ್ಮ ಮತ್ತು ತಮ್ಮ ಮಕ್ಕಳ ದೇಹದ ಅಂಗಾಂಗಗಳನ್ನೇ ಮಾರಾಟ ಮಾಡುತ್ತಿದ್ದಾರೆ ಎಂದು ಕಾಬೂಲ್‌ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ತಾಲೀಬಾನ್ ಆಡಳಿತ ಶುರುವಾದಾಗಿನಿಂದ ಅಪಘಾನಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಅಂತಾರಾಷ್ಟ್ರೀಯ ಸಹಾಯ ಒದಗುವುದು ಬಹುತೇಕ ಸ್ಥಗಿತವಾಗಿದೆ. ಇನ್ನೊಂದೆಡೆ ಹಿಮಪಾತವೂ ಆಗುತ್ತಿದ್ದು ಜನ ಹಸಿವಿನಿಂದ ಕಂಗಾಲಾಗಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ದಾರಿಯೂ ಕಾಣದೆ ಸ್ವಂತ ದೇಹದ ಅಂಗಾಗಳನ್ನೇ ಮಾರಿಕೊಳ್ಳುತ್ತಿದ್ದಾರೆ. ಕಿಡ್ನಿಯನ್ನು ೧೫೦೦೦ ದಿಂದ ೨೦೦೦೦ ರೂ. ದರಕ್ಕೆ ಮಾರಲಾಗುತ್ತಿದೆ. ಅಲ್ಲದೇ ಒಂದು ಮಗುವಿಗೆ ಸರಾಸರಿ ೧ ಲಕ್ಷ ರೂ. ದರಕ್ಕೆ ಮಾರಾಟ ಮಾಡಲಾಗುತ್ತಿದೆ.
ಕೆಲವರು ಅಂಗಾಗ ಮತ್ತು ಮಕ್ಕಳನ್ನು ಮಾರಾಟ ಮಾಡಲು ಬಲವಂತವಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ದತ್ತಿ ಸಮೀತಿಯೊಂದು ಈ ರೀತಿ ಅಂಗಾಂಗ ಮತ್ತು ಮಕ್ಕಳ ಮಾರಾಟ ತಡೆಗೆ ತೀವ್ರ ಪ್ರಯತ್ನ ಮಾಡುತ್ತಿದೆ. ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಆರ್ಥಿಕ ಸಹಾಯ ಒದಗಿಸುತ್ತಿದೆ. ಆದರೂ ಪರಿಸ್ಥಿತಿ ಕೈ ಮೀರುತ್ತಿದ್ದು ಎಲ್ಲರಿಗೂ ಸಹಾಯ ಹಸ್ತ ಚಾಚಲು ದತ್ತಿ ಸಮೀತಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.
ಕೋಟ್ಯಾಂತರ ಬೆಲೆಯ ಕಾರ್ ಖರೀದಿಸಿದ ದಿನವೇ ಅಪಘಾತ: ಉದ್ಯಮಿ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ