ಪ್ರಗತಿವಾಹಿನಿ ಸುದ್ದಿ ಬೆಂಗಳೂರು – ಗುರುವಾರ ಬೆಳಗ್ಗೆ ರಾಜ್ಯಾದ್ಯಂತ ಉಂಟಾಗಿದ್ದ ಗೊಂದಲಗಳಿಗೆ ಸರಕಾರಿ ಸ್ಪಷ್ಟೂಕರಣ ನೀಡಿ ಹೊಸ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ ಸೆಮಿ ಲಾಕ್ ಡೌನ್ ಘೋಷಿಸಿರುವುದನ್ನು ಸ್ಪಷ್ಟಪಡಿಸಲಾಗಿದ್ದು, ಮೇ 4ರ ವರೆಗೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವ್ಯಾಪಾರ ವ್ಯವಹಾರಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದೆ.
ರಾಜ್ಯದಲ್ಲಿ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯವರೆಗೆ ಈ ಆದೇಶ ಅನ್ವಯವಾಗಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಈಗಾಗಲೆ ಹೊರಡಿಸಿರುವ ವೀಕ್ ಎಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.
ವಿಶೇಷವೆಂದರೆ, ಈ ಎರಡೂ ಆದೇಶಗಳಿಗೆ ಹೆಚ್ಚಿನ ವ್ಯತ್ಯಾಸವೇನೂ ಕಾಣುತ್ತಿಲ್ಲ.
ವಾರದ ದಿನಗಳಲ್ಲೂ ದಿನಸಿ ಅಂಗಡಿ, ಹಾಲು, ತರಕಾರಿ, ಮಾಂಸ, ಮೀನು, ಪಶು ಆಹಾರಗಳನ್ನು ಹೊರತು ಪಡಿಸಿ ಇತರ ಅಂಗಡಿ ತೆರೆಯುವಂತಿಲ್ಲ. ಹೊಟೆಲ್, ಮದ್ಯ ಇತ್ಯಾದಿಗಳನ್ನು ಪಾರ್ಸೆಲ್ ಕೊಡಲು ಅವಕಾಶವಿದೆ.
ಇಲ್ಲಿದೆ ಸ್ಪಷ್ಟೀಕರಣ ಆದೇಶ – Clarification Order Regarding Shops
ರಾಜ್ಯಸರಕಾರದಿಂದ ಮತ್ತೊಂದು ಪರಿಷ್ಕೃತ ಮಾರ್ಗಸೂಚಿ
ದಿಢೀರ್ ಹೊಸ ನಿಯಮ ಜಾರಿ; ರಾಜ್ಯಾದ್ಯಂತ ಎಲ್ಲವೂ ಬಂದ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ