Kannada NewsKarnataka NewsNational
*ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗಲೆ ನಿಧನ ಹೊಂದಿದ ಹಿರಿಯ ಐಪಿಎಸ್ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ: ನಿವೃತ್ತಿ ಹೊಂದಲು ಕೇವಲ ಮೂರು ದಿನ ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ನಿಧನ ಹೊಂದಿರುವ ಘಟನೆ ನಡೆದಿದೆ.
ಕೇರಳದ ಎಡಿಜಿಪಿ ಮಹಿಪಾಲ್ ಯಾದವ್ ನಿಧನರಾಗಿದ್ದಾರೆ. ಮಹಿಪಾಲ್ ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ, ಅವರ ಕುಟುಂಬದ ಸದಸ್ಯರು ಅವರನ್ನು ತವರು ರಾಜ್ಯ ರಾಜಸ್ಥಾನಕ್ಕೆ ಕರೆದೊಯ್ದು ಜೈಪುರದ ಆಸ್ಪತ್ರೆಗೆ ದಾಖಲಿಸಿದ್ದರು.
ತಮ್ಮ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾಗಿದ್ದ ಮಹಿಪಾಲ್ ಯಾದವ್, ಕೇರಳ ಅಬಕಾರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಅವರು ವೈದ್ಯಕೀಯ ರಜೆಯ ಮೇಲೆ ಕರ್ತವ್ಯದಿಂದ ತೆರಳುವುದಕ್ಕೂ ಮುನ್ನ, ಅವರನ್ನು ಇತ್ತೀಚೆಗಷ್ಟೇ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ಕೇರಳ ಸರಕಾರ ನೇಮಿಸಿತ್ತು.