
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಹಿರಿಯ ಪತ್ರಕರ್ತ ಕೆ ಸತ್ಯ ನಾರಾಯಣ ಅವರು ಶುಕ್ರವಾರ ಮುಂಜಾನೆ ವಿಧಿವಶರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಓರ್ವ ಪುತ್ರಿ ಇದ್ದಾರೆ.
ಸಂಯುಕ್ತ ಕರ್ನಾಟಕದ ಮುಖಾಂತರ 1965ರಲ್ಲಿ ಕರಡು ತಿದ್ದುವವರಾಗಿ ಪತ್ರಿಕಾ ಕ್ಷೇತ್ರ ಪ್ರವೇಶಿಸಿ, ಅಲ್ಲೇ ಸಹ ಸಂಪಾದಕರಾಗಿ ಅನಂತರ ಕನ್ನಡ ಪ್ರಭದಲ್ಲಿ ಸಹಾಯಕ ಸಂಪಾದಕರಾಗಿ ಮತ್ತೆ ಸಂಯುಕ್ತ ಕರ್ನಾಟಕಕ್ಕೆ ವಾಪಸಾಗಿದ್ದರು. ಅನಂತರ ವಿಜಯ ಕರ್ನಾಟಕ, ಸುವರ್ಣ ಟೈಮ್ಸ್ ಆಫ್ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಕೆ ಸತ್ಯ ನಾರಾಯಣ ಅವರು ಹೃದಯಾಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರ ಪುತ್ರಿ ಮತ್ತು ಅಳಿಯ ಆಸ್ಟ್ರೇಲಿಯ ದಲ್ಲಿದ್ದು ನಾಳೆ ಸಂಜೆ ಹೊತ್ತಿಗೆ ಬೆಂಗಳೂರು ತಲುಪಲಿದ್ದಾರೆ. ಅಂತ್ಯ ಸಂಸ್ಕಾರವು ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ.
https://pragati.taskdun.com/latest/murughashreebail-pleahearing-postpone/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ