Belagavi NewsBelgaum NewsKannada NewsKarnataka News
*ಬೆಳಗಾವಿ ಅಧಿವೇಶನಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ (63) ಆಕಾಶವಾಣಿಯ ಅರೆಕಾಲಿಕ ಪ್ರತಿನಿಧಿಯಾಗಿ ಬೆಳಗಾವಿ ವಿಧಾನ ಮಂಡಲ ಅಧಿವೇಶನ ಕರ್ತವ್ಯಕ್ಕೆ ಬಂದಿದ್ದರು. ಇಂದು ಶನಿವಾರ (ಡಿಸೆಂಬರ್ 20) ಬೆಳಿಗ್ಗೆ ಬೆಂಗಳೂರು ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಯಲಹಂಕದ ಬಿಎಂಟಿಸಿ ಬಸ್ ನಲ್ಲಿ ಕುಳಿತಾಗ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ರಕರ್ತನ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮೃತರು ಪತ್ನಿ,ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.



