Kannada NewsKarnataka NewsLatestNational

*ಆತ್ಮಹತ್ಯೆಗೆ ಶರಣಾದ IIT ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಐಐಟಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ವೇಯ್ಟ್ ಲಿಫ್ಟಿಂಗ್ ರಾಡ್ ಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 23 ವರ್ಷದ ಪನವ್ ಜೈನ್ ಮೃತ ವಿದ್ಯಾರ್ಥಿ. ಬಿಹಾರ ಮೂಲದ ಈತ ವಿವೇಕ್ ನಗರದ ಮನೆಯಲ್ಲಿ ವಾಸವಾಗಿದ್ದ.

Home add -Advt

ಪೋಷಕರು ರಾತ್ರಿ ವಾಕಿಂಗ್ ಮುಗಿಸಿ ಮನೆಗೆ ವಾಪಾಸ್ ಆದಾಗ ಪ್ರಣವ್ ಜೈನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಭಾರ ಎತ್ತುವ ರಾಡ್ ಗೆ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರುಶೀಲನೆ ನಡೆಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಪಣವ್ ತಂದೆ ಮಾಹಿತಿ ನೀಡಿದ ಪ್ರಕಾರ ಆತ ಕೆಲ ತಿಂಗಳಿಂದ ಒತ್ತಡದಿಂದ ಬಳಲುತ್ತಿದ್ದ. ಖಿನ್ನತೆಗೆ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದ ಎಂದಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


Related Articles

Back to top button