ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆಯ ಐತಿಹಾಸಿಕ, ಪುಣ್ಯ ಕ್ಷೇತ್ರಗಳ ಮಣ್ಣು ಮತ್ತು ತೀರ್ಥವನ್ನು ಇಂದು ಕಳುಹಿಸಲಾಯಿತು.
ವಿಶ್ವ ಹಿಂದೂ ಪರಿಷತ್ ನಿರ್ಣಯದಂತೆ ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕ್ಷೇತ್ರಗಳಾದ ಕಪಿಲೇಶ್ವರ ಮಂದಿರ, ಕಮಲ ಬಸ್ತಿ, ಕಣಬರಗಿಯ ಸಿದ್ದೇಶ್ವರ ಕ್ಷೇತ್ರ, ರಾಮತೀರ್ಥ ನಗರದ ರಾಮತೀರ್ಥ ಮಂದಿರಗಳ ತೀರ್ಥಗಳು, ಮಣ್ಣು ಮತ್ತು ಬೆಳಗಾವಿ ಜಿಲ್ಲೆಯ ಪಂಚನದಿಗಳಾದ ಕೃಷ್ಣೆ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ, ಅಮೃತ ಜಲ ಮತ್ತು ಮಣ್ಣನ್ನು ಮತ್ತು ಅದೇ ರೀತಿ ವೀರ ಧೀರರಾಳಿದ ನಾಡು ಬೆಳಗಾವಿ ಜಿಲ್ಲೆಯ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಮಡಿದ ಮಣ್ಣನ್ನು, ಅದೇ ರೀತಿ ಐತಿಹಾಸಿಕ ರಾಮಾಯಣದಲ್ಲಿ ಉಲ್ಲೇಖಿಸಿರುವ ಅಯೋಧ್ಯೆಯ ರಾಮನಿಗೆ ಮತ್ತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನಿನ ಶಬರಿ ಕೊಳ ಮತ್ತು ಕರಡಿಗುಡ್ಡ ಈ ಕ್ಷೇತ್ರದ ಮಣ್ಣು ಮತ್ತು ತೀರ್ಥವನ್ನು ಕಾರ್ಯಕರ್ತರು ಸಂಗ್ರಹಿಸಿ ಐತಿಹಾಸಿಕ ರಾಮಜನ್ಮ ಭೂಮಿಯ ರಾಮ ಮಂದಿರ ಪೂಜೆಗೆ ಅರ್ಪಿಸಲು ಇಂದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಾಂತರ ರಾಮಜನ್ಮಭೂಮಿ ಅಯೋಧ್ಯೆಗೆ ತಲುಪಿಸಲು ಕೊರಿಯರ್ ಮುಖಾಂತರ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂತ ಗೌರವ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸ್ವಯಂಸೇವಕ್ ಸಂಘಟನೆ ಪ್ರಾಂತ ಕಾರ್ಯವಾಹರಾದ ರಾಘವೇಂದ್ರ ಕಾಗವಾಡ, ಪ್ರಾಂತ ಸಹ ಪ್ರಚಾರಕರಾದ ನರೇಂದ್ರ, ವಿಭಾಗ ಕಾರ್ಯವಾಹ ರಾದ ಕೃಷ್ಣಾನಂದ ಕಾಮತ್, ಪ್ರಾಂತ ಕ್ರೀಡಾ ಭಾರತೀಯ ಅಶೋಕ್ ಶಿಂತ್ರೆ, ವಿಶ್ವಹಿಂದೂ ಪರಿಷತ್, ಬಜರಂಗದಳದ ಎಲ್ಲಾ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ