*ಪ್ರತ್ಯೇಕ ಪ್ರಕರಣ: ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತ್ಯೇಕ ಪ್ರಕರಣಗಳಲ್ಲಿ ಲಂಚಕ್ಕೆ ಕೈ ಒಡ್ಡಿದ ಬೆಳಗಾವಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಂಘದ ನೊಂದಣಿಗಾಗಿ ರೂ.೫೦,೦೦೦/- ಗಳ ಲಂಚಕ್ಕೆ ಬೇಡಿಕೆ ಇಟ್ಟು ಟ್ರ್ಯಾಪ್ ಆದ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಅಧೀಕ್ಷಕ
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ನಿವಾಸಿಯಾದ ಪ್ರಶಾಂತ ಆತ್ಮರಾಮ ಕೆಳಗಡೆ, ಇವರು ತಮ್ಮ ಯುನೈಟೆಡ್ ಸೊಶಿಯಲ್ & ಸ್ಪೋರ್ಟ್ಸ ಕ್ಲಬ್ ಹೆಸರಿನ ಸಂಘವನ್ನು ನಿಯಮಗಳ ಪ್ರಕಾರ ಸಹಕಾರ ಸಂಘಗಳ, ಉಪನಿಬಂಧಕರ ಕಛೇರಿ, ಬೆಳಗಾವಿಯಲ್ಲಿ ನೊಂದಣಿಗಾಗಿ ಅರ್ಜಿ ಸಲ್ಲಿಸಿದ ವೇಳೆ ಕಛೇರಿಯ ಅಧೀಕ್ಷಕ ಭರತೇಶ ಶೇಬನ್ನವರ ಸಂಘದ ನೊಂದಣಿಗಾಗಿ ಮೇಲಾಧಿಕಾರಿಗಳ ಹೆಸರಿನಲ್ಲಿ ರೂ.೫೦,೦೦೦/- ಗಳ ಲಂಚಕ್ಕೆ ಬೇಡಿಯನ್ನು ಇಟ್ಟು, ಸುಮಾರು ೨೦ ದಿನಗಳಿಂದ ಕೆಲಸವನ್ನು ಮಾಡಿ ಕೊಟ್ಟಿರಲಿಲ್ಲ.
ಇದ್ದಾಗ ಫಿರ್ಯಾದಿ ರವರು ಆಪಾದಿತ ಅಧಿಕಾರಿಯ ಲಂಚದ ಬೇಡಿಯ ಸಂಬಂಧಪಟ್ಟಂತೆ ದಿನಾಂಕ ೨೪/೦೩/೨೦೨೫ ರಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಾದ ನಿರಂಜನ ಪಾಟೀಲ, ಪೊಲೀಸ್ ಇನ್ಸಪೆಕ್ಟರ್‌ರವರು (ಪ್ರಕರಣ ಸಂಖ್ಯೆ ೦೫/೨೦೨೫ ಕಲಂ ೭(ಚಿ) ಲಂಚ ಪ್ರತಿಬಂಧಕ ಕಾಯ್ದೆ ೧೯೮೮ (ತಿದ್ದುಪಡಿ-೨೦೧೮) ರಡಿ) ಪ್ರಕರಣ ದಾಖಲಿಸಿಕೊಂಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಬಿ. ಎಸ್. ಪಾಟೀಲ, ಡಿಎಸ್‌ಪಿ ಲೋಕಾಯುಕ್ತ ಬೆಳಗಾವಿ, ನಿರಂಜನ ಪಾಟೀಲ, ಪೊಲೀಸ್ ಇನ್ಸಪೆಕ್ಟರ್ ಲೋಕಾಯುಕ್ತ ಬೆಳಗಾವಿ, ರವಿಕುಮಾರ ಧರ್ಮಟ್ಟಿ , ಪೊಲೀಸ್ ಇನ್ಸಪೆಕ್ಟರ್ ಲೋಕಾಯುಕ್ತ ಬೆಳಗಾವಿ, ಸಿಬ್ಬಂದಿಗಳಾದ ರವಿ ಮಾವರಕರ ಸಿಎಚ್‌ಸಿ, ರಾಜು ಪಾಟೀಲ ಸಿಎಚ್‌ಸಿ, ಮಂಜುನಾಥ ಕಾನಪೇಠ ಸಿಎಚ್‌ಸಿ, ಗಿರೀಶ ಪಾಟೀಲ ಸಿಪಿಸಿ ಮತ್ತು ಅಭಿಜಿತ ಜಮಖಂಡಿ ಸಿಪಿಸಿ ತಂಡದವರು ದಾಳಿ ಮಾಡಿ ಆಪಾದಿತ ಅಧಿಕಾರಿಯನ್ನು ಲಂಚ ಪಡೆಯುವ ವೇಳೆ ಲಂಚದ ಸಮೇತ ಬಂಧಿಸಿರುತ್ತಾರೆ. ಹಾಗೂ ಲಂಚ ಪ್ರತಿಬಂಧಕ ಕಾಯ್ದೆ ೧೯೮೮ (ತಿದ್ದುಪಡಿ-೨೦೧೮) ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿರುತ್ತಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-೧೯೭೨ ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವದನ್ನು ತಪ್ಪಿಸಲು ರೂ.೬,೦೦೦/- ಗಳ ಲಂಚಕ್ಕೆ ಬೇಡಿಕೆ ಇಟ್ಟು ಟ್ರ್ಯಾಪ್ ಆದ ಉಪವಲಯ ಅರಣ್ಯ ಅಧಿಕಾರಿ ರಾಮದುರ್ಗ
ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರವಲಯದ ಮಲಪ್ರಭಾ ನದಿಯ ಬ್ರಿಡ್ಜ್ ಕೆಳಗೆ ಬಲೆ ಹಾಕಿ ಮೂರು ಪಾರಿವಾಳಗಳನ್ನು ಹಿಡಿದಿದ್ದು, ಫಾರೆಸ್ಟ್ ಅಧಿಕಾರಿ & ಸಿಬ್ಬಂದಿ ಕೂಡಿ ಮೂರು ಜನರನ್ನು ಪಾರಿವಾಳಗಳ ಸಮೇತ ಕರೆದುಕೊಂಡು ಬಂದು ತಮ್ಮ ಫಾರೆಸ್ಟ್ ಆಫೀಸಿನಲ್ಲಿ ತಂದು ಕೂಡ್ರಿಸಿದ್ದರು.
ಅವರ ಮೇಲೆ ಕೇಸು ಮಾಡದಿರಲು ಇದರಲ್ಲಿಯ ಆಪಾದಿತ-೧ ಮಹಮ್ಮದಸಾಬ ಇಮಾಮಸಾಬ ಮೋಸಾಮಿಯಾ, (ವಯಾ:೫೨ ವರ್ಷ. ಉದ್ಯೋಗಃ ಫಾರೆಸ್ಟ್ ವಾಚರ್, ವಲಯ ಅರಣ್ಯಾಧಿಕಾರಿಗಳ ಕಚೇರಿ ರಾಮದುರ್ಗ ಪ್ರಾದೇಶಿಕ ವಲಯ ರಾಮದುರ್ಗ), ಆಪಾದಿತ-೨ ವಿನಾಯಕ ವೀರಭದ್ರಗೌಡಾ ಪಾಟೀಲ, (ವಯಾ: ೪೧ ವರ್ಷ, ಉದ್ಯೋಗಃ ಉಪ ವಲಯ ಅರಣ್ಯ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳ ಕಚೇರಿ ರಾಮದುರ್ಗ ಪ್ರಾದೇಶಿಕ ವಲಯ ರಾಮದುರ್ಗ), ಇಬ್ಬರೂ, ಫಿರ್ಯಾದಿಗೆ ಒಟ್ಟು ರೂ,೭,೦೦೦/- ಲಂಚದ ಹಣಕ್ಕೆ ಬೇಡಿಕೆ ಇಟ್ಟು, ದಿನಾಂಕ ೨೧/೦೩/೨೦೨೫ ರಂದು ರೂ,೬,೦೦೦/- ಲಂಚದ ಹಣ ಪಡೆದುಕೊಂಡಿದ್ದರು.
ಉಳಿದ ರೂ. ೧,೦೦೦/- ಲಂಚದ ಹಣವನ್ನು ತಂದು ನೀಡುವಂತೆ ಬೇಡಿಕೆ ಇಟ್ಟ ಅಪರಾಧಕ್ಕೆ ಸಂಬಂಧಿಸಿದಂತೆ ದಿನಾಂಕ ೨೪/೦೩/೨೦೨೫ ರಂದು ಫಿರ್ಯಾದಿ ನೀಡಿದ ದೂರಿನನ್ವಯ ತನಿಖಾಧಿಕಾರಿಗಳಾದ ಎಸ್. ಎಚ್. ಹೊಸಮನಿ, ಪೊಲೀಸ್ ಇನ್ಸಪೆಕ್ಟರ್ (ಪ್ರಕರಣ ಸಂಖ್ಯೆ ೦೬/೨೦೨೫ ಕಲಂ ೭(ಚಿ) ಲಂಚ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ-೨೦೧೮) ರಡಿ) ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರಾದ ಹನುಮಂತರಾಯರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಭರತ್. ಎಸ್. ಆರ್, ಡಿಎಸ್‌ಪಿ ಲೋಕಾಯುಕ್ತ ಬೆಳಗಾವಿ, ಎಸ್. ಎಚ್. ಹೊಸಮನಿ, ಪೊಲೀಸ್ ಇನ್ಸಪೆಕ್ಟರ್ ಲೋಕಾಯುಕ್ತ ಬೆಳಗಾವಿ, ವೆಂಕಟೇಶ ಕೆ. ಯಡಹಳ್ಳಿ, ಪೊಲೀಸ್ ಇನ್ಸಪೆಕ್ಟರ್ ಲೋಕಾಯುಕ್ತ ಬೆಳಗಾವಿ, ಸಿಬ್ಬಂದಿಗಳಾದ ಎಸ್. ಎಸ್. ಪೂಜಾರ ಸಿಎಚ್‌ಸಿ, ಬಸವರಾಜ ಕಡೊಳ್ಳಿ ಸಿಪಿಸಿ, ಎಲ್. ಎಸ್. ಹೊಸಮನಿ ಸಿಪಿಸಿ, ಬಿ. ಬಿ. ಹುದ್ದಾರ ಸಿಪಿಸಿ, ಸಂತೋಷ ಬೇಡಗ ಸಿಪಿಸಿ, ಶಶಿಕುಮಾರ ದೇವರಮನಿ ಸಿಪಿಸಿ, ಶ್ರೀಮತಿ ಫಾತಿಮಾ ಅಲಿಖಾನವರ ಮಪಿಸಿ, ಗುಡ್ಡಪ್ಪ ಗೊರವರ ಎಪಿಸಿ ಮತ್ತು ಧನಂಜಯ ಕೆ. ನಾಯ್ಕ ಎಪಿಸಿ ವಗೈರೆ ತಂಡದವರು ದಾಳಿ ಮಾಡಿ ಆಪಾದಿತ ಅಧಿಕಾರಿಯವರನ್ನು ಲಂಚ ಪಡೆಯುವ ವೇಳೆ ಲಂಚದ ಸಮೇತ ಬಂಧಿಸಿರುತ್ತಾರೆ. ಹಾಗೂ ಲಂಚ ಪ್ರತಿಬಂಧಕ ಕಾಯ್ದೆ ೧೯೮೮ (ತಿದ್ದುಪಡಿ-೨೦೧೮) ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿರುತ್ತಾರೆ.