Kannada NewsKarnataka NewsNationalPoliticsTravel

*ಇರಾನ್ ಮೇಲೆ ಭೀಕರ ‘ಹೆಲ್‌ಫೈರ್ ಕ್ಷಿಪಣಿ’ ದಾಳಿ ನಡೆಸಿದ ಅಮೆರಿಕಾ*

ಪ್ರಗತಿವಾಹಿನಿ ಸುದ್ದಿ: ಅಮೆರಿಕ-ಇರಾನ್ ನಡುವಿನ ಯುದ್ಧ ಮುಂದುವರೆದಿದ್ದು, ಹೊರ್ಮುಜ್ ಜಲಸಂಧಿಯ ಮೂಲಕ ಇರಾನ್ ಕಡೆ ಸಾಗುತ್ತಿದ್ದ ಬೃಹತ್ ತೈಲ ಟ್ಯಾಂಕರ್ ಹಡಗೊಂದರ ಮೇಲೆ ಅಮೆರಿಕದ ಸೇನೆ ಭೀಕರ ‘ಹೆಲ್‌ಫೈರ್ ಕ್ಷಿಪಣಿ’ ದಾಳಿ ನಡೆಸಿ ಅದನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ.

ಈ ದಾಳಿಯ ಬೆನ್ನಲ್ಲೇ ಇರಾನ್‌ನ ಪ್ರಮುಖ ಕರಾವಳಿ ನಗರಗಳಾದ ಕೇಶ್ ದ್ವೀಪ ಬಂದರ್ ಅಬ್ಬಾಸ್ ಮತ್ತು ಚಬಹಾರ್‌ಗಳಲ್ಲಿ ಭಾರಿ ಸ್ಪೋಟಗಳು ಸಂಭವಿಸಿವೆ ಎನ್ನಲಾಗಿದೆ

Home add -Advt

ಕಳೆದ ಕೆಲವು ದಿನಗಳಿಂದ ದಕ್ಷಿಣ ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಸರಣಿ ದಾಳಿಗಳಲ್ಲಿ ಕನಿಷ್ಠ 35 ನಾಗರಿಕರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇದಲ್ಲದೆ, ಅಮೆರಿಕ ನಡೆಸಿದ ಮತ್ತೊಂದು 13 ಕ್ಷಿಪಣಿಗಳ ಭೀಕರ ದಾಳಿಗೆ ಇರಾನ್‌ 7 ಸೈನಿಕರು ಬಲಿಯಾಗಿದ್ದಾರೆ.

ಅಮೆರಿಕದ ಈ ‘ಹೇಡಿತನದ ಆಕ್ರಮಣ’ಕ್ಕೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅತ್ಯಂತ ಕ್ರೂರವಾಗಿ ಪ್ರತಿಕಾರ ತೀರಿಸಿಕೊಂಡಿದೆ. ಬಕ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಇರಾನ್ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡೋನ್ ದಾಳಿಗಳ ಸುರಿಮಳೆಗೈದಿವೆ.

ಈ ದಾಳಿಯಿಂದಾಗಿ ಬಹ್ರನ್‌ನಲ್ಲಿರುವ ಅಮೆರಿಕದ ಅತ್ಯಂತ ಶಕ್ತಿಶಾಲಿ ‘ಫಿಫ್ ಫೀಟ್ ಪ್ರಧಾನ ಕಚೇರಿಗೆ ಭಾರಿ ಹಾನಿಯಾಗಿದೆ ಎಂದು ಇರಾನ್ ಸೈನ್ಯ ಪ್ರತಿಪಾದಿಸಿದೆ. ಈ ಭೀಕರ ದಾಳಿಯಿಂದಾಗಿ ಬಹ್ರನ್‌ನಲ್ಲಿ ಯುದ್ಧದ ಸೈರನ್‌ಗಳು ಮೊಳಗುತ್ತಿದ್ದರೆ, ಕುವೈತ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುತ್ತಿದೆ.

Related Articles

Back to top button