
ಪ್ರಗತಿವಾಹಿನಿ ಸುದ್ದಿ: ಲಾರಿ, ಟೆಂಪೋ ಹಾಗೂ ಕಾಂಕ್ರೀಟ್ ಮಿಕ್ಸರ್ ನಡುವೆ ಸರಣಿ ಅಪಘಾತ ನಡೆದಿದ್ದು, ಮೂವರು ಧಾರುಣವಾಗಿ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿ ನಡೆದಿದೆ.
ಯಾದಗಿರಿ ಮೂಲದ ಕಟ್ಟಡ ಕಾರ್ಮಿಕರಾದ ನರಸಪ್ಪ(35), ಹುಸೇನಪ್ಪ(34), ಪಾದಚಾರಿ ತುಮಕೂರು ತಾಲೂಕಿನ ಸೀತಕಲ್ಲು ನಿವಾಸಿ ಶಿವಗಂಗಪ್ಪ(55) ಮೃತರು. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟೆಂಪೊ ಹಿಂದೆ ಕಾಂಕ್ರೀಟ್ ಮಿಕ್ಸರ್ ಮಾಡುವ ಟ್ರಾಲಿ ಕಟ್ಟಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಲಾರಿ ಡಿಕ್ಕಿ ಬಳಿಕ ಮುಂದೆ ಪಾದಚಾರಿಗೂ ಡಿಕ್ಕಿಯಾಗಿ ಆತ ಕೂಡ ಮೃತಪಟ್ಟಿದ್ದಾರೆ. ಇನ್ನು ಘಟನೆಯಿಂದ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸರಣಿ ಅಪಘಾತದಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲ ಕಾಲ ವಾಹನ ಸಾವರರು ಪರದಾಟ ಅನುಭವಿಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತೆರವು ಕಾರ್ಯ ಮಾಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ