ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಎಂದಿನಂತೆ ಯಥಾವತ್ತಾಗಿ ನಡೆಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇಂದು ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಸದನದ ಕಾರ್ಯಕಲಾಪಗಳನ್ನು ನಡೆಸುವುದಾಗಿ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಮೂಡಬಿದಿರೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯಕ್ರಮ ನಿಗದಿಯಾಗಿತ್ತು. ನಮ್ಮ ಮೋಹನ್ ಆಳ್ವ ಮತ್ತು ಪಿಜಿಆರ್ ಸಿಂದ್ಯಾ ಅವರ ನೇತೃತ್ವದಲ್ಲಿ ಬಹಳ ಉತ್ತಮವಾದ ಕಾರ್ಯಕ್ರಮ ಆಗುತ್ತಿದೆ. ಪೂರ್ವ ನಿಯೋಜಿಯ ಕಾರ್ಯಕ್ರಮಕ್ಕಾಗಿ ಅಧಿವೇಶನದ ಸಮಯದಲ್ಲಿ ಬಿಡುವು ಮಾಡಿಕೊಂಡು ಬಂದಿದ್ದೇನೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಎನ್.ಸಿ.ಸಿ ತರಹ ಮಕ್ಕಳಲ್ಲಿ ಶಿಸ್ತು ಮತ್ತು ದೇಶಪ್ರೇಮವನ್ನು ತರುವ ಸಂಸ್ಥೆಯಾಗಿದೆ. ಕರ್ನಾಟಕದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮವಾಗಿದ್ದು ಸರ್ಕಾರ ಅದಕ್ಕೆ ಸದಾಕಾಲ ಸಹಕಾರ ನೀಡುತ್ತ ಬಂದಿದೆ. ಈ ಬಾರಿ ದೇಶ ವಿದೇಶದಿಂದ ಎಲ್ಲರೂ ಬಂದಿದ್ದಾರೆ. ಅಲ್ಲಿಗೆ ಹೋಗಿ ನನ್ನ ಬೆಂಬಲ ಮತ್ತು ಉತ್ತೇಜನ ಕೊಡುವುದು ನನ್ನ ಕರ್ತವ್ಯ. ಅದಕ್ಕಾಗಿ ಬಂದಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
*ಸೂರತ್ಕಲ್ ಕೊಲೆ; ಪೊಲೀಸರಿಂದ ಕ್ರಮ*
ನಿನ್ನೆ ಆ ಘಟನೆ ನಡೆಯಬಾರದಿತ್ತು. ಇದು ದುರದೃಷ್ಟಕರ ಘಟನೆ. ಈಗಾಗಲೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರ ತನಿಖೆ ಪ್ರಗತಿಯಲ್ಲಿದ್ದು ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಲಸಾಗುತ್ತದೆ. ವಿಚಾರಣೆ ವೇಳೆ ಯಾವ ಕಾರಣಕ್ಕಾಗಿ, ಹಿನ್ನೆಲೆ ಏನ? ಸತ್ಯಾಸತ್ಯತೆ ಹೊರ ಬರುತ್ತದೆ ಎಂದರು.
*ದಕ್ಷಿಣ ಕನ್ನಡ ಜನರಿಗೆ ಸಿಎಂ ಮನವಿ*
ದಕ್ಷಿಣ ಕನ್ನಡ, ಉಡುಪಿಯ ಜನರು ಊಹಾಪೋಹಗಳಿಗೆ ಅವಕಾಶ ಕೊಡದೇ, ಶಾಂತಿ- ಸುವ್ಯವಸ್ಥೆಗೆ ದಕ್ಕೆಯಾಗದಂತೆ ಯಾರು ಕೂಡ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಪರಸ್ಪರ ವಿಶ್ವಾಸದಿಂದ ಹೋಗುವುದು ಅವಶ್ಯಕವಾಗಿದೆ. ಪೊಲೀಸರು ಯಾವುದೇ ಒತ್ತಾಯ, ಒತ್ತಡವಿಲ್ಲದೇ ಮುಕ್ತವಾಗಿ ತನಿಖೆ ಮಾಡುತ್ತಾರೆ. ಪ್ರಕರಣದಲ್ಲಿ ಯಾರೇ ಇರಲಿ, ಅವರ ಮೇಲೆ ನೂರಕ್ಕೆ ನೂರು ಕಾನೂನಾತ್ಮಕ ಕ್ರಮ ನಾವು ತೆಗೆದುಕೊಳ್ಳುತ್ತೇವೆ. ಸಮಾಜದಲ್ಲಿ ಹಿಂಸೆಗೆ ದಾರಿ ಮಾಡಿಕೊಡುವರನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಅದು ನಮ್ಮ ಕರ್ತವ್ಯ, ಸಮಾಜದ ಕರ್ತವ್ಯ. ಕ್ರಿಯೆಗೆ ಪ್ರತಿಕ್ರಿಯೆ ಅಂತ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ತನಿಖೆ ಮಾಡುತ್ತಾರೆ ಎಂದರು.
https://pragati.taskdun.com/sushasana-divas-employment-letter-for-10-thousand-youthcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ