Belagavi NewsBelgaum NewsKarnataka News

*ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕಿರುಕುಳ: ಇಬ್ಬರು ಆರೋಪಿಗಳಿಗೆ ಕಠಿಣ ಜೈಲು ಶಿಕ್ಷೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ರಾಜಕೀಯ ಸಂಘರ್ಷದ ಕಾರಣಕ್ಕೆ ದೂರುದಾರನ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಶಾಲೆಯಿಂದ ಮನೆಗೆ ಮರಳುವ ವೇಳೆ ಮೋಟಾರ್ ಬೈಕಿನಲ್ಲಿ ಬಂದು ಅಪಹರಿಸಿ, ಕಿರುಕುಳ ನೀಡಿದ ಪ್ರಕರಣದಲ್ಲಿ ದಂತೆ ಬೆಳಗಾವಿಯ ವಿಶೇಷ ಶೀಘ್ರಗತಿ ಫೋಕ್ಸೋ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ತಲಾ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ೫,೦೦೦ ದಂಡ ವಿಧಿಸಿ ತೀರ್ಪು ನೀಡಿದೆ.
೨೦೨೧ರಲ್ಲಿ ಹುಲಕುಂದ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಪ್ರಕಾರ, ಪಿರ್ಯಾದಿದಾರನ ಮಗಳು ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ, ಆರೋಪಿಗಳು ಲಕ್ಮಣ ಭೀಮಪ್ಪ ಮಾದರ, ಗಜ್ಜಿನಮನಿ ಮತ್ತು ಸೂಮನಿಂಗಪ್ಪ ಫಕೀರಪ್ಪ ಮಾದರ ಗಜ್ಜಿನಮನಿ ಎಂಬಿಬ್ಬರು ಬಾಲಕಿಗೆ ಚಾಕು ತೋರಿಸಿ, ಬೆದರಿಸಿ ಬೈಕ್ ನಲ್ಲಿ ಅಪಹರಿಸಿ ಕಿರುಕುಳ ನೀಡಿದ್ದಾರೆ.


ಇನ್ನು ಸಾಲಹಳ್ಳಿ ಬಳಿ ಬೈಕ್ ನಿಲ್ಲಿಸಿದಾಗ ಬಾಲಕಿ ಬೈಕ್ ನಿಂದ ಜಿಗಿದು ರಸ್ತೆಯಲ್ಲಿಯೇ ಓಡಿ ತಪ್ಪಿಸಿಕೊಂಡು ಬಸ್ ನಿಲ್ದಾಣದ ಕಡೆ ಬಂದು ಪಾರಾಗಿದ್ದಳು. ಈ ಬಗ್ಗೆ ೨೪ ಫೆಬ್ರವರಿ ೨೦೨೧ ರಂದು ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ ೩೬೩, ೩೫೪(೨), ೫೦೬ ಮತ್ತು ಫೋಕ್ಸೋ ಕಾಯ್ದೆಯ ಸೆಕ್ಷನ್ ೧೭ ಅಡಿಯಲ್ಲಿ ಕಟಕೋಳ ಪೊಲೀಸರು ತನಿಖೆ ಕೈಗೊಂಡಿದ್ದರು.


ವಿಶೇಷ ಶೀಘ್ರಗತಿ ನ್ಯಾಯಾಲಯ (ಕೇಸ್ ನಂ. ೧೩೩/೨೦೨೧) ತೀರ್ಪು ನೀಡಿದ್ದು, ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ. ಪುಷ್ಪಲತಾ ಅವರು ಒಟ್ಟು ೮ ಸಾಕ್ಷಿಗಳು, ೩೪ ದಾಖಲೆಗಳು ಹಾಗೂ ಒಂದು ಮುದ್ದೆಮಾಲು ಆಧಾರವಾಗಿ ಬಳಸಿಕೊಂಡು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ೨ ಲಕ್ಷ ಪರಿಹಾರ ಧನ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್.ವಿ. ಪಾಟೀಲ, ವಾದ ನಡೆಸಿದರು.

Home add -Advt


Related Articles

Back to top button