ಲೈಂಗಿಕ ಕಿರುಕುಳ ಪ್ರಕರಣ; ಮಹಿಳಾ ವೇದಿಕೆ ಸದಸ್ಯೆ ವಿರುದ್ಧ ಎಫ್ ಐಆರ್ ದಾಖಲು

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಇಂಟರ್ನ್ ಶಿಪ್ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕೊಡಿಸುವ ನೆಪದಲ್ಲಿ ಬೆದರಿಕೆಯೊಡ್ದಿದ ಆರೋಪದಲ್ಲಿ ಮಹಿಳಾ ವೇದಿಕೆ ಸದಸ್ಯೆ ಸೇರಿದಂತೆ ಹಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಇಂಟರ್ನ್ ಶಿಪ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ವಕೀಲ ರಾಜೇಶ್ ಭಟ್ ವಿರುದ್ಧ ಕೇಳಿಬಂದಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕಲು ಮಹಿಳಾ ವೇದಿಕೆ ಸದಸ್ಯೆ ಮುಂದಾಗಿದ್ದು, ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಅಶೋಕ ನಗರದ ಜಾಗೃತ ಮಹಿಳಾ ವೇದಿಕೆ ಸದಸ್ಯೆ ಪವಿತ್ರಾ ಆಚಾರ್ಯ ಸೇರಿದಂತೆ ಹಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಪವಿತ್ರಾ ಅವರು ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ ಬೆದರಿಕೆ ಹಾಕಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಬಲವಂತದಿದ ಮುಚ್ಚಳಿಕೆ ಬರೆಸಿದ್ದಾರೆ. ಮುಚ್ಚಳಿಕೆಯಲ್ಲಿ ರಾಜೇಶ್ ಭಟ್ ಬಳಿ ಕ್ಷಮೆ ಕೇಳಲಾಗಿದೆ. ನೀವು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮ್ಮನ್ನು ಟಾರ್ಗೆಟ್ ಮಾಡಿದ್ದೆ. ಆಡಿಯೋ ಎಡಿಟ್ ಮಾಡಿ ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದೆ. ನಿಮ್ಮ ಹೆಸರು ಹಾಳು ಮಾಡಬೇಕು ಎಂಬ ಕಾರಣಕ್ಕೆ ಹಾಗೆ ಮಾಡಿದ್ದೆ. ಇನ್ನುಮುಂದೆ ಇಂತಹ ತಪ್ಪು ಮಾಡಲ್ಲ, ನಿಮ್ಮ ಮುಂದೆ ಮುಖ ತೋರಿಸುವುದೂ ಇಲ್ಲ ಎಂದು ಸಂತ್ರಸ್ತೆ ಸ್ನೇಹಿತೆಯಿಂದಲೂ ಮುಚ್ಚಳಿಕೆ ಬರೆಸಿದ್ದಾರೆ ಎನ್ನಲಾಗಿದೆ. ಇದೀಗ ಪವಿತ್ರಾ ಆಚಾರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.

ಈ ನಡುವೆ ಸಂತ್ರಸ್ತೆ ಬಾಯ್ ಫ್ರೆಂಡ್ ಧ್ರುವ ಹಾಗೂ ಆತನ ತಾಯಿ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ. ಸಂತ್ರಸ್ತೆ ಪ್ರಕರಣದ ಬಳಿಕ ಧ್ರುವನ ಬಳಿ ರಕ್ಷಣೆ ಕೋರಿದ್ದಳು. ರಕ್ಷಣೆ ಕೊಡುವುದಾಗಿ ಹೇಳಿ ಬಳಿಕ ರಾಜೇಶ್ ಭಟ್ ಜೊತೆ ಸಂಧಾನ ಮಾಡಿಕೊಂಡಿದ್ದಾರೆ. ಸಂತ್ರಸ್ತೆಯನ್ನೇ ಅನುಮಾನಿಸಿದ್ದಲ್ಲದೇ ಆಕೆಯ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಧ್ರುವ ಹಾಗೂ ಆತನ ತಾಯಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪ: ರಾಜೇಶ್ ಭಟ್ ವಿರುದ್ಧ FIR

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button