Kannada NewsLatest

370 ನೇ ವಿಧಿ ರದ್ದತಿ ವಿರುದ್ಧದ ಮನವಿ ಹಿಂಪಡೆದ ಶಾ ಫೈಸಲ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಜಮ್ಮು ಕಾಶ್ಮೀರದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಯ ಶಾ ಫೈಸಲ್ ಅವರು 2019 ರಲ್ಲಿ ಕೇಂದ್ರ ಸರಕಾರ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದ್ದ ತಮ್ಮ ಮನವಿಯನ್ನು ಹಿಂಪಡೆದಿದ್ದಾರೆ.

“ನಾನು ಬಹಳ ಹಿಂದೆಯೇ ಅರ್ಜಿಯನ್ನು ಹಿಂತೆಗೆದುಕೊಂಡಿದ್ದೇನೆ. 370 ನೇ ವಿಧಿ ನಿಷ್ಪ್ರಯೋಜಕವಾಗಿದೆ. ಇಂದಿನ ಕಾಶ್ಮೀರ 2019ರ ಕಾಶ್ಮೀರಕ್ಕೆ ಸ್ವಲ್ಪವೂ ಹೋಲಿಕೆ ಹೊಂದಿಲ್ಲ ಎಂದು ಅವರು ಮಾಧ್ಯಮವೊಂದರ ಮುಂದೆ ಹೇಳಿಕೊಂಡಿದ್ದಾರೆ.

“ಜನರು ಮುಂದುವರಿಯಲು ಬಯಸುತ್ತಾರೆ, ನಾನು ಮುಂದೆ ಹೋಗಿದ್ದೇನೆ,” ಎಂದು ಹೇಳಿರುವ ಶಾ ಫೈಸಲ್ “ಅದನ್ನು ಹಿಂಪಡೆದಿದ್ದಕ್ಕೆ ವಿಷಾದವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಶಾ ಫೈಸಲ್ ಅವರು ಕೇಂದ್ರದ ಸಂಸ್ಕೃತಿ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Home add -Advt

Related Articles

Back to top button