Latest

ಶೇನ್ ವಾರ್ನ್ ಸಾವಿನ ರಹಸ್ಯ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್ ರಿಪೋರ್ಟ್

ಪ್ರಗತಿವಾಹಿನಿ ಸುದ್ದಿ; ಕ್ಯಾನ್ ಬೆರಾ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಆಘಾತವನ್ನುಂಟುಮಾಡಿತ್ತು. ಶೇನ್ ವಾರ್ನ್ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಶೇನ್ ವಾರ್ನ್ ಅವರ ಮರಣೋತ್ತರ ಪರೀಕ್ಷೆಯ ವರದಿಗಳು ಬಂದಿದ್ದು, ಅನುಮಾನಗಳಿಗೆ ತೆರೆಬಿದ್ದಿದೆ.

ಶೇನ್ ವಾರ್ನ್ ಮರಣೋತ್ತರ ಪರೀಕ್ಷಾ ವರದಿಗಾಗಿ ಇಡೀ ಜಗತ್ತೇ ಕಾದಿತ್ತು ಎಂದರೂ ತಪ್ಪಾಗಲಾರದು, ಇದೀಗ ಶವಪರೀಕ್ಷೆ ವರದಿ ಥಾಯ್ ಪೊಲೀಸರಿಗೆ ಲಭ್ಯವಾಗಿದ್ದು, ಶೇನ್ ವಾರ್ನ್ ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Home add -Advt

ರಜೆಯ ದಿನಗಳನ್ನು ಕಳೆಯಲೆಂದು ಶೇನ್ ವಾರ್ನ್ ಥಾಯ್ಲೆಂಡ್ ಗೆ ತೆರಳಿದ್ದರು. ಈ ವೇಳೆ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ತಿಳಿದುಬಂದಿತ್ತು. ಶೇನ್ ವಾರ್ನ್ ಸಾವಿನ ಸುದ್ದಿ ದಿಗ್ಭ್ರಮೆಯುಂಟುಮಾಡಿತ್ತು. ಇದೀಗ ಮರಣೋತ್ತರ ಪರೀಕ್ಷಾ ವರದಿ ಲಭ್ಯವಾಗಿದ್ದು, ನೈಸರ್ಗಿಕ ಕಾರಣಗಳಿಂದ ಶೇನ್ ವಾರ್ನ್ ಸಾವು ಸಂಭವಿಸಿದೆ. ಈ ಬಗ್ಗೆ ಅವರ ಕುಟುಂಬಕ್ಕೂ ತಿಳಿಸಲಾಗಿದೆ ಎಂದು ಉಪ ರಾಷ್ಟ್ರೀಯ ಪೊಲೀಸ್ ವಕ್ತಾರ ಕ್ರಿಸ್ಸಾನಾ ಪಟ್ಟನಾಚರೋನ್ ತಿಳಿಸಿದ್ದಾರೆ. ಈ ಮೂಲಕ ಶೇನ್ ವಾರ್ನ್ ಸಾವಿನ ಬಗ್ಗೆ ಹರಡಿದ್ದ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

ಮತ್ತೆ ಕಚ್ಚಾ ತೈಲ ಬೆಲೆ ಹೆಚ್ಚಳ: ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಏರಿಕೆ ಆತಂಕ; ಕಚ್ಚಾ ತೈಲ ಬ್ಯಾರೆಲ್ ಗೆ 130 ಡಾಲರ್ ನಿಗದಿ

Related Articles

Back to top button