Kannada NewsLatestPolitics

*ನಾಸಿಕ್ ನಿಂದ ಖಡಕ್ ಸಂದೇಶ ರವಾನಿಸಿದ ಶರದ್ ಪವಾರ್*

ಪ್ರಗತಿವಾಹಿನಿ ಸುದ್ದಿ; ನಾಸಿಕ್: ಅಜಿತ್ ಮತ್ತು 9 ಬಂಡಾಯ ಶಾಸಕರ ದಿಢೀರ್ ಭೇಟಿ ಬಳಿಕ ಶರದ್ ಪವಾರ್ ಖಡಕ್ ಸಂದೇಶ ರವಾನಿಸಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರು ತಮ್ಮ ” ಪ್ರಗತಿಪರ ರಾಜಕೀಯ ” ವನ್ನು ಮುಂದುವರೆಸುವುದಾಗಿ ಮತ್ತು ಬಿಜೆಪಿಯನ್ನು ವಿರೋಧಿಸುವುದಾಗಿ ಭಾನುವಾರ ಹೇಳಿದ್ದಾರೆ,

ಮುಂಬೈನ ವೈ ಬಿ ಚವಾಣ್ ಸೆಂಟರ್‌ನಲ್ಲಿ ಅಜಿತ್ ಪವಾರ್ ಮತ್ತು ಬಂಡಾಯ ಶಾಸಕರು ತಮ್ಮ “ಆಶೀರ್ವಾದ” ಪಡೆದ ಕೆಲವೇ ಗಂಟೆಗಳ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಯುವ ಘಟಕದ ಕಾರ್ಯಕರ್ತರನ್ನು ಉದ್ದೇಶಿಸಿ ಶರದ್ ಪವಾರ್ ಅವರು ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವಿಲ್ಲವೆಂದು, ಅವರ “ಪ್ರಗತಿಪರ ರಾಜಕೀಯ” ಮುಂದುವರೆಯುವುದಾಗಿ
ಸ್ಪಷ್ಟಪಡಿಸಿದರು.

ಜುಲೈ 2 ರಂದು ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಸೇರ್ಪಡೆಗೊಂಡ ಅಜಿತ್ ಪವಾರ್ ಮತ್ತು ಎನ್‌ಸಿಪಿ ಶಾಸಕರು ಶರದ್ ಪವಾರ್ ಬಳಿ “ಆಶೀರ್ವಾದ” ಕೋರಿದರು. ಶರದ್ ಪವಾರ್ ಅವರಲ್ಲಿ ಪಕ್ಷವನ್ನು ಮರುಸಂಘಟಿಸಲು ಪರಿಗಣಿಸುವಂತೆ ವಿನಂತಿಸಿದ ಗಂಟೆಗಳ ನಂತರ ಈ ಹೇಳಿಕೆ ಬಂದಿದೆ. ಚಿಕ್ಕಪ್ಪನ ವಿರುದ್ಧ ಅಜಿತ್ ಪವಾರ್ ಬಂಡಾಯವೆದ್ದ ನಂತರ ಪಕ್ಷ ಇಬ್ಭಾಗವಾಗಿತ್ತು.

ಅಜಿತ್ ಪವಾರ್ ಬಣದೊಂದಿಗಿನ ಸಭೆಯ ಸಂದರ್ಭದಲ್ಲಿ ಮೌನವಾಗಿದ್ದ ಶರದ್ ಪವಾರ್ ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ನಾಸಿಕ್‌ನಿಂದ ಯುವ ಘಟಕದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ, ಅವರು ಎನ್‌ಸಿಪಿಯ ಸಿದ್ಧಾಂತವನ್ನು ಪುನರುಚ್ಚರಿಸಿದರು, “ಬಿಜೆಪಿಯ ವಿಭಜಕ ರಾಜಕೀಯ” ಕ್ಕೆ ತಮ್ಮ ವಿರೋಧವನ್ನು ಒತ್ತಿ ಹೇಳಿದರು. ಒಗ್ಗಟ್ಟು, ಸಮಾನತೆ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳ ಮೇಲೆ ದೃಢವಾಗಿ ನಿಲ್ಲುವಂತೆ ಅವರು ಕಾರ್ಯಕರ್ತರನ್ನು ಒತ್ತಾಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button