ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ದುಷ್ಕರ್ಮಿಗಳು ಚಾಕು ಇರಿದ ಪ್ರಕರಣದ ಬೆನ್ನಲ್ಲೇ ನಟ ಶಾರುಖ್ ಖಾನ್ ಮೇಲೂ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ನಟ ಶಾರುಖ್ ಖಾನ್ ಅವರ ಮುಂಬೈನ ಮನ್ನತ್ ನಿವಾಸದ ಹೊರ ಭಾಗದಲ್ಲಿ ಕಬ್ಬಿಣದ ಏಣಿ ಪತ್ತೆಯಾಗಿದ್ದು, ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಈ ಬಗ್ಗೆ ನಟ ಶಾರುಖ್ ಖಾನ್ ಯಾವುದೇ ದೂರು ನೀಡಿಲ್ಲ.
ಸೈಫ್ ಅಲಿ ಖಾನ್ ಮೇಲೆ ದಳಿಗೂ ಮೂರು ನಾಲ್ಕು ದಿನ ಮೊದಲು ನಟ ಶಾರುಖ್ ಖಾನ್ ಮನೆಗೆ ನುಗ್ಗಿ ದಾಳಿ ನಡೆಸಲು ದುಷ್ಕರ್ಮಿಗಳ ಗ್ಯಾಂಗ್ ಸಂಚು ರೂಪಿಸಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ