ಶಶಿಧರ ಕುರೇರ್ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರನ್ನು ಮತ್ತೆ ಬದಲಾಯಿಸಲಾಗಿದೆ. ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಶಶಿಧರ ಕುರೇರ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿಯಾಗಿ ನೇಮಕವಾಗಿದ್ದಾರೆ.
ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತ ಹುದ್ದೆಯ ಜೊತೆಗೆ ಪ್ರಭಾರ ಅಧಿಕಾರ ಹೊಂದಿದ್ದ ಶಶಿಧರ ಕುರೇರ ಇದೀಗ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಯಾಗಿ ಪೂರ್ಣಾವಧಿ ಅಧಿಕಾರ ಹೊಂದಲಿದ್ದಾರೆ.
ಶಶಿಧರ ಕುರೇರ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಪರ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಎಂಎಸ್ ಶ್ರೇಣಿಯ ಶಿರೀನ್ ನದಾಫ್ ಬೆಳಗಾವಿ ಸ್ಮಾರ್ಟಿ ಸಿಟಿ ಎಂಡಿಯಾಗಿ ಇತ್ತೀಚೆಗೆ ನೇಮಕವಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಶಿರೀನ್ ನದಾಫ್ ಅವರಿಗೆ ಬೇರೆ ಹುದ್ದೆಯನ್ನು ತೋರಿಸಲಾಗಿಲ್ಲ. ಕುರೇರ ಜೊತೆ ಇನ್ನೂ ಇಬ್ಬರು ಕೆಎಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಅನ್ನಪೂರ್ಣ ನಾಗಪ್ಪ ಮುದಕಣ್ಣವರ್ ಸವಣೂರು ಉಪವಿಭಾಗಾಧಿಕಾರಿಯಾಗಿ, ಎಸ್.ಎಂ.ಜುಲ್ ಫಿಖಾರ್ ಉಲ್ಲಾ ಕೆಎಂಡಿಸಿ ಎಂಡಿಯಾಗಿ ವರ್ಗಾವಣೆ ಹೊಂದಿದ್ದಾರೆ.
ಶಶಿಧರ ಕುರೇರ ಅವರು ಬೆಳಗಾವಿಸ್ಮಾರ್ಟ್ ಸಿಟಿಯ 5ನೇ ಎಂಡಿಯಾಗಿದ್ದಾರೆ.
ಸಂಬಂಧಿಸಿದ ಸುದ್ದಿಗಳು –
ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು?
ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆ: 4 ವರ್ಷದಲ್ಲಿ 4 ಕೋಟಿ ರೂ. ಕಾಮಗಾರಿ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ