*ಮಾಳಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಚೆಕ್ ವಿತರಿಸಿದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಯಕ್ಸಂಬಾ ಪಟ್ಟಣದ ಪ್ರತಿಷ್ಠಿತ ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ -ಆಪ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಯಕ್ಸಂಬಾ-2 ನೇ ಶಾಖೆಯ ಶಾಖಾ ಸಲಹಾ ಸಮಿತಿ ಸದಸ್ಯರಾಗಿ ಕಳೆದ 9 ವರ್ಷಗಳಿಂದಲೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಯಕ್ಸಂಬಾ ಪಟ್ಟಣದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ದಿ.ದಯಾನಂದ ಮಾಳಿ (ಕಾಡಾಪುರೆ)ಅವರು ಇತ್ತೀಚೆಗೆ ಅಕಾಲಿಕ ನಿಧನರಾಗಿದ್ದರಿಂದ, ಅವರ ವಾರಸುದಾರರಾದ ದೀಪಾಲಿ ದಯಾನಂದ ಮಾಳಿ (ಕಾಡಾಪುರೆ) ಅವರಿಗೆ 10 ಲಕ್ಷ ರೂಪಾಯಿಗಳ ಮೊತ್ತದ ವಿಮಾ ಚೆಕ್ ನ್ನು ಜೊಲ್ಲೆ ಗ್ರೂಪ್ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ವಿತರಿಸಿದರು.
ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ 2018 ರಿಂದ ಇಲ್ಲಿಯವರೆಗೆ ಒಟ್ಟು 17 ಕೋಟಿ ಅಧಿಕ ಲಕ್ಷದ ಮೊತ್ತದ ವಿಮೆಯ ಚೆಕ್ ನ್ನೂ ನಿರ್ದೇಶಕ ಮಂಡಳಿ ಸದಸ್ಯರಿಗೆ ಮತ್ತು ಸಿಬ್ಬಂದಿಗಳ ಮರಣ ಹೊಂದಿದ್ದಲ್ಲಿ ಅವರ ವಾರಸದಾರರರಿಗೆ ನೀಡಲಾಗಿದೆ.ನಮ್ಮ ಸಂಸ್ಥೆಯ ನಿರ್ದೇಶಕರು,ಸದಸ್ಯರು ಹಾಗೂ ಸಿಬ್ಬಂದಿಗಳು ಮರಣ ಹೊಂದಿದ ಕುಟುಂಬ ವರ್ಗಕ್ಕೆ ಸಹಾಯ ಮಾಡಿ ಅವರ ಸಂಕಷ್ಟಕ್ಕೆ ನೆರವಾಗುತ್ತಿದ್ದು, ಅವರ ಬಾಳಲ್ಲಿ ಬೆಳಕೆಂಬ ಸುದಿನ ತರಲು ಶ್ರಮವಹಿಸುತ್ತಿದ್ದೇವೆ. ಅವರ ನೋವು, ನಲಿವಿನಲ್ಲಿ ನಮ್ಮ ಜೊಲ್ಲೆ ಪರಿವಾರ ಸದಾ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವ ರಾಯಜಾಧವ, ಶಂಕರ ರೆಂದಾಳೆ,ರಾಜು ಮಾಗದುಮ್ಮ,ರಾಜು ಬಾಕಳೆ, ರಾಮಚಂದ್ರ ಬಾಕಳೆ, ಮಹಾದೇವ ರೆಂದಾಳೆ, ಶರದ ಶಿಂಧೆ,ಬಸವರಾಜ ವಸ್ತ್ರದ, ವಿಷ್ಣು ಬುಬನಾಳೆ, ತುಕಾರಾಮ ಗಿಡ್ಡ, ಬಾಲಚಂದ್ರ ಸಲಗರೆ,ಸಂತೋಷ ಶಿಂಧೆ, ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ