VTU Add
Beereshwara 36
LaxmiTai 5

*ಕೇಂದ್ರ ಸಚಿವ ಗಡ್ಕರಿ ಭೇಟಿಯಾದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ*

Anvekar 3

ಚಿಕ್ಕೋಡಿ-ಗೋಟೂರು ಚತುಷ್ಪಥ ಹೆದ್ದಾರಿ ಅನುಮೋದನೆಗೆ ಮನವಿ


ಪ್ರಗತಿವಾಹಿನಿ ಸುದ್ದಿ; ನವದೆಹಲಿ:
ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು.

ಈ ವೇಳೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಮುರುಗುಂಡಿಯಿಂದ ಚಿಕ್ಕೋಡಿಯವರೆಗೆ 65ಕೀ.ಮಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರು ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಚಿಕ್ಕೋಡಿ ಪಟ್ಟಣದಿಂದ ಗೋಟೂರು ವರೆಗೆ ಚಿಕ್ಕೋಡಿ ಬಾಯ್ ಪಾಸ್ ಜೊತೆಗೆ 27 ಕಿ.ಮೀ. 4 ಲೈನ್ ಹೆದ್ದಾರಿ ರಸ್ತೆ ಡಿ.ಪಿ.ಆರ್. ಸಲ್ಲಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ಅನುಮೋದನೆ ಮಂಜೂರು ಮಾಡುವಂತೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಮನವಿ ಮಾಡಿದರು.

Cancer Hospital 2
Emergency Service

ನಿಪ್ಪಾಣಿ ಮತಕ್ಷೇತ್ರದ ತವಂದಿ ಘಾಟ್ ಹತ್ತಿರ ಅಪಘಾತ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅಲ್ಲಿ ಬ್ರಿಡ್ಜ್ ನಿರ್ಮಿಸಲು ಹಾಗೂ ಮಾಂಗೂರ ಮತ್ತು ಸೌಂದಲಗಾ ಕ್ರಾಸ್ ಹತ್ತಿರ ಓವರ್ ಬ್ರಿಡ್ಜ್ ನಿರ್ಮಿಸಲು ಮತ್ತು ನಿಪ್ಪಾಣಿ ನಗರದ ಜವಾಹರ ಕೆರೆಯ ಹೂಳೆತ್ತುವ ಕಾರ್ಯವನ್ನು ಮಾಡಿಕೊಡುತ್ತಿದ್ದು, ಇದಕ್ಕೆ ಸಹಕಾರ ನೀಡಿದ ಕೇಂದ್ರ ಸಚಿವರಿಗೆ ಶಾಸಕಿ ಶಶಿಕಲಾ ಜೊಲ್ಲೆ ಹೃತ್ಪೂರ್ವಕ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಮಹಾರಾಷ್ಟ್ರ ರಾಜ್ಯಸಭಾ ಸದಸ್ಯರಾದ ಧನಂಜಯ ಮಹಾಡಿಕ, ಶಾಸಕರಾದ ಅಭಯ ಪಾಟೀಲ ಉಪಸ್ಥಿತರಿದ್ದರು.

Bottom Add3
Bottom Ad 2