ಆಧ್ಯಾತ್ಮದ ಮೂಲಕ ಸಮಾಜವು ಪ್ರಗತಿಯ ದಿಕ್ಕನ್ನು ಪಡೆಯುತ್ತದೆ: ಶಾಸಕಿ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳಿಗೆ ಬಹುದೊಡ್ಡ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಅಧ್ಯಯನ ಮಾಡುವುದೊಂದಿಗೆ ಅನುಕರಿಸಲಾಗುತ್ತಿದೆ. ಆಧ್ಯಾತ್ಮಿಕತೆಯ ಮೂಲಕ ಆಚರಿಸಲಾಗುವ ಹಬ್ಬಗಳು ಸಮಾಜದಲ್ಲಿ ಶಕ್ತಿಯನ್ನು ಸೃಷ್ಟಿಸುತ್ತವೆ. ಪ್ರತಿಯೊಬ್ಬರಿಗೂ ಶಕ್ತಿ ಮುಖ್ಯ. ಹಾಗಾಗಿ ಅಧ್ಯಾತ್ಮದ ಮೂಲಕ ಸಮಾಜ ಪ್ರಗತಿಯ ದಿಕ್ಕನ್ನು ಪಡೆಯುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಪಾದಿಸಿದರು.
ತಾಲೂಕಿನ ಶ್ರೀಪೇವಾಡಿಯ ಗ್ರಾಮದೇವತೆ ಬಸವಾನ ದೇವಸ್ಥಾನದಲ್ಲಿ ಅಧಿಕಮಾಸದ 4ನೇ ಸೋಮವಾರ ಆಯೋಜಿಸಿದ ಲಘು ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಪೇವಾಡಿಯ ಬಸವಾನ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದೆ. ಈ ದೇವಸ್ಥಾನದಲ್ಲಿ ಲಘು ರುದ್ರಾಭಿಷೇಕ ನೆರವೇರಿಸುವ ಸೌಭಾಗ್ಯ ನಮ್ಮ ಕುಟುಂಬಕ್ಕೆ ದೊರೆತಿರುವುದು ಸಂತಸ ತಂದಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಂದರ್ಭದಲ್ಲಿ ಸಂಸ್ಕೃತಿ, ಸಂಸ್ಕಾರದ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಲು ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಈ ಲಘು ಉದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು’ ಎಂದರು. ನನ್ನ ಕ್ಷೇತ್ರವು ತಮ್ಮನ್ನು ಅತ್ಯಂತ ವಿಶ್ವಾಸದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ ಮಾಡಿ ಕ್ಷೇತ್ರದ ಸೇವೆ ಮಾಡಲು ಅವಕಾಶ ಕಲ್ಪಿಸಿದೆ ಎಂದರು.
ಆರಂಭದಲ್ಲಿ ಹನುಮಾನ್ ಭಜನಿ ಮಂಡಳದ ಮೂಲಕ ದಿಂಡಿ ಸಮಾರಾಧನೆಯೊಂದಿಗೆ ಸ್ವಾಗತ, ಮಂತ್ರಘೋಷಗಳ ಮೂಲಕ ಲಘು ರುದ್ರಾಭಿಷೇಕ ನೆರವೇರಿಸಲಾಯಿತು. ದಯಾನಂದ ಸ್ವಾಮಿ ಹಾಗೂ 51 ಸ್ವಾಮಿಗಳವರ ಪೌರೋಹಿತ್ಯದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಲಘು ರುದ್ರಾಭಿಷೇಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿ ಟ್ರಸ್ಟ್ ವತಿಯಿಂದ ಶಾಸಕಿ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ್ ಜೊಲ್ಲೆ, ಪ್ರಿಯಾ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ರಾಮಗೊಂಡಾ ಪಾಟೀಲ, ಅವಿನಾಶ ಪಾಟೀಲ, ಸಮಿತ ಸಾಸನೆ, ರಾಜಾರಾಮ ಖೋತ, ಮನಿಷಾ ರಾಂಗೋಳೆ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಪ್ರಕಾಶ ಶಿಂಧೆ, ವಿಭಾವರಿ ಖಾಂಡಕೆ, ಸರೋಜನಿ ಜಮದಾಡೆ, ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ