ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಮತಕ್ಷೇತ್ರದ ಜತ್ರಾಟ ಗ್ರಾಮದಲ್ಲಿ, ನೆರೆ ಹಾವಳಿಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ಖುದ್ದಾಗಿ ಪರಿಶೀಲಿಸಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ, ಅವರೊಂದಿಗೆ ನಾನು ಸದಾ ನಿಲ್ಲುವುದಾಗಿ ಅಭಯ ನೀಡಿದರು.
ನಿಪ್ಪಾಣಿ ಮತಕ್ಷೇತ್ರದ ಜತ್ರಾಟ, ಹುನ್ನರಗಿ, ಸಿದ್ನಾಳ, ಮಮದಾಪುರ ಗಳತಗಾ ಗ್ರಾಮದಲ್ಲಿ, ನೆರೆಪೀಡಿತ ಪ್ರದೇಶವನ್ನು ವೀಕ್ಷಿಸಿ, ಪ್ರವಾಹದಿಂದ ತೊಂದರೆಗೊಳಗಾದ ಕುಟುಂಬದ ಸದಸ್ಯರಿಗೆ ಜೊಲ್ಲೆ ಉದ್ಯೋಗ ಸಮೂಹ ವತಿಯಿಂದ ಅಕ್ಕಿ, ಗೋಧಿ, ರವಾ, ಸಕ್ಕರೆ, ಪೋಹೆ, ಬೆಳೆ, ಅಡುಗೆ ಎಣ್ಣೆ, ಚಹಾ ಪುಡಿ, ಮುಂತಾದ ಆಹಾರ ಕಿಟ್ ಗಳನ್ನು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ವಿತರಣೆ ಮಾಡಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಕ್ಷೇತ್ರದಾದ್ಯಂತ ನೆರೆ ಹಾವಳಿಯಿಂದ ತೊಂದರೆಗೀಡಾಗಿರುವ ಪ್ರದೇಶಗಳಿಗೆ ಖುದ್ದಾಗಿ ತೆರಳಿ, ಜನತೆಯ ಸಮಸ್ಯೆಗಳನ್ನು ಅರಿತಿದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸಿ, ಬೆಳೆ ಹಾನಿ, ಮನೆ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಸಲುವಾಗಿ, ಅಧಿಕಾರಿಗಳಿಗೆ ಸರ್ವೇ ನಡೆಸಿ, ಸಂಪೂರ್ಣ ವರದಿ ನೀಡಲು ಸೂಚಿಸಿದ್ದೇನೆ. ಆದಷ್ಟು ಬೇಗ ವರದಿಯನ್ನಾಧರಿಸಿ ಬಿಜೆಪಿ ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾದ ಎಮ್.ಪಿ. ಪಾಟೀಲ್, ನಿರ್ದೇಶಕರಾದ ರಾಮಗೊಂಡ ಪಾಟೀಲ್, ಬಿಜೆಪಿ ಗ್ರಾಮಿಣ ಅಧ್ಯಕ್ಷರಾದ ಪವನ್ ಪಾಟೀಲ್, ಎಸ್. ಎಸ್ ಡವಣೆ, ಸರೋಜಿನಿ ಜಮದಾಡೆ, ಪ್ರಕಾಶ್ ಶಿಂಧೆ, ಸಿದ್ದು ನರಾಟೆ, ಶಿವಸಾಗರ್ ಪಾಟೀಲ್, ಪ್ರಶಾಂತ್ ಪಾಟೀಲ್, ಮಹಾವೀರ ಅವಟೆ, ಮನೋಹರ ಮಗದುಮ್ಮ, ಅಭಯ ಪಾಟೀಲ, ಶಿವಾಜಿ ನಲವಡೆ, ವಿಶಾಲ್ ಜಬಡೆ, ಕಾಕಾಸೋ ಪಾಟೀಲ್, ಡಾ. ಎ. ಎ. ಸಯ್ಯದ್, ಸುಧಾಕರ್ ಥೋರಾತ, ವಿಜಯ್ ಜಬಡೆ, ಸಚಿನ್ ಕೊಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಡಸೋಸಿಯ ದುರದುಂಡೀಶ್ವರ ಸಿದ್ದಸಂಸ್ಥಾನ ಮಠಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ