Kannada NewsKarnataka NewsLatest

*ಹ್ಯಾಟ್ರಿಕ್ ವಿಜಯದೊಂದಿಗೆ ಮತ್ತೆ ವಿಧಾನಸಭೆಗೆ ಕಳುಹಿಸಿ; ಮಾದರಿ ನಗರವನ್ನಾಗಿ ಮಾಡಲು ಸಹಕರಿಸಿ; ಶಶಿಕಲಾ ಜೊಲ್ಲೆ ಮನವಿ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಎರಡು ಬಾರಿ ವಿಧಾನಸಭೆಗೆ ಕಳುಹಿಸಿಕೊಟ್ಟರು. ಅವರೆಲ್ಲರ ಆಶಿರ್ವಾದದಿಂದ ನಾನು ಇಲ್ಲಿಯವರೆಗೆ 2 ಸಾವಿರ ಕೋಟಿ ರೂ.ಗೂ ಅಧಿಕ ಕಾಮಗಾರಿಗಳ ಮೂಲಕ ಅವರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ಈಗ ಹ್ಯಾಟ್ರಿಕ್ ವಿಜಯದೊಂದಿಗೆ ಮತ್ತೆ ವಿಧಾನಸಭೆಗೆ ಕಳುಹಿಸಿಕೊಟ್ಟು ಮಾದರಿ ನಗರವನ್ನಾಗಿ ಮಾಡಲು ಸಹಕರಿಸಿ’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳಿಯ ಛತ್ರಪತಿ ಶಿವಾಜಿ ಮಹಾರಾಜ ಚೌಕ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು. ‘ಕರೊನಾ ಕಾಲದ ಮೊದಲ ಅಲೆಯಲ್ಲಿ ನಾನೂ ಸಹ ಕರೊನಾಗೆ ತುತ್ತಾಗಿದ್ದ ಸಂದರ್ಭದಲ್ಲಿ ನನ್ನ ಆರೋಗ್ಯದ ದಶೆ ನೋಡಿ ಎಲ್ಲರೂ ಬೆಂಗಳೂರಿನAತಹ ಮಹಾನಗರಗಳಲ್ಲಿಯ ಪ್ರತಿಷ್ಠಿತ ಯಾವುದಾದರೊಂದು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ಆದರೆ ನನ್ನ ಕ್ಷೇತ್ರದ ಜನತೆಗಾಗಿ ಸ್ಥಾಪಿಸಿದ ಸ್ಥಳೀಯ ಆರೈಕೆ ಕೇಂದ್ರದಲ್ಲಿಯೇ ಉಪಚಾರ ಪಡೆಯುವುದಾಗಿ ನಿರ್ಣಯಿಸಿ ಅಲ್ಲಿಯೇ ಉಪಚಾರ ಪಡೆದೆ. ನನ್ನೊಂದಿಗೆ ನಾವು ಸ್ಥಾಪಿಸಿದ ೪ ಕೇಂದ್ರಗಳಲ್ಲಿ ಸುಮಾರು 700ಕ್ಕೂ ಅಧಿಕ ರೋಗಿಗಳು ಗುಣಮುಖರಾಗಿ ಹೊರಹೊಮ್ಮಿದ್ದು ಸಂತೋಷದ ವಿಷಯ. ಎಂದೆAದಿಗೂ ನಾನು ನಿಮ್ಮೊಂದಿಗಿರುವೆ’ ಎಂದ ಅವರು ಬಹುಮತಗಳಿಂದ ತಮ್ಮನ್ನು ಗೆಲ್ಲಿಸಿ ಎಂದು ಮತಯಾಚಿಸಿದರು. ನಗರ ಸೇರಿದಂತೆ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ವಿವರಿಸಿ ಮುಂದಿನ ಉದ್ದೇಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ದಾದಾರಜೆ ದೇಸಾಯಿ, ಅಮಿತ ರಣದಿವೆ, ಮೊದಲಾದವರು ಸೇರಿದಂತೆ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ನಾಗರಿಕರು ಉಪಸ್ಥಿತರಿದ್ದರು.

ವಿರೋಧಿಗಳಿಗೆ ಅಭಿವೃದ್ಧಿಯೇ ಉತ್ತರ:

ಇದಕ್ಕೂ ಮುನ್ನ ಜತ್ರಾಟ್‌ವೇಸ್‌ನಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು ‘ವಿರೋಧಿಗಳು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ನಾನೇನು ಅಸವರ ಕುರಿತು ಮಾತನಾಡುವುದಿಲ್ಲ. ನನ್ನ ಕ್ಷೇತ್ರದ ಅಭಿವೃಧ್ಧಿ ಕಂಡು ಅವರೆಲ್ಲರೂ ಅಸುಯೆಪಟ್ಟು ಮಾತನಾಡುತ್ತಿದ್ದಾರೆ. ನನ್ನ ಗೆಲುವೇ ಅವರಿಗೆ ಉತ್ತರವಾಗಲಿದೆ’ ಎಂದರು.

https://pragati.taskdun.com/vidhanasabha-electionvote-from-homemahadeva-mahalinga-maali104-yearsrajeev-kumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button