Kannada NewsKarnataka NewsLatestUncategorized

*ಬಜರಂಗದಳ ನಿಷೇಧದ ಘೋಷಣೆ ಖಂಡನಿಯ; ಸಚಿವೆ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಕಾಂಗ್ರೆಸ್ ಪಕ್ಷದ ಬಜರಂಗ ದಳ ನಿಷೇಧ ಘೋಷಣೆಯನ್ನು ನನ್ನ ಸಹಿತ ಎಲ್ಲ ಹಿಂದೂಗಳು ಖಂಡಿಸುತ್ತೇವೆ’ ಎಂದು ಸಚಿವೆ ಹಾಗೂ ಸ್ಥಳೀಯ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಹೇಳಿದರು.

ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿರುವ ಬಜರಂಗ ದಳ ನಿಷೇಧದ ಘೋಷಣೆಯನ್ನು ಖಂಡಿಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಇಡೀ ಜಗತ್ತಿನಲ್ಲಿಯೇ ಭಾರತ ದೇಶವು ತನ್ನದೇ ಆದಂತಹ ಒಂದು ಸಂಪ್ರದಾಯ, ಸಂಸ್ಕೃತಿ, ಆಧ್ಯಾತ್ಮಿಕತೆ ಹೊಂದಿರತಕ್ಕಂತಹ ಒಂದು ಅದ್ಭುತ ಮತ್ತು ಪವಿತ್ರವಾದ ದೇಶ. ಭಾರತ ದೇಶವನ್ನು ಹಿಂದುಸ್ತಾನ ಎಂದು ಬೋಧಿಸಿಕೊಂಡು ಬರುತ್ತಿದ್ದೇವೆ. ಇಡೀ ಜಗತ್ತಿನಲ್ಲಿ ಹಿಂದುಗಳು ವಾಸಿಸುವಂತಹ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವು ಕೂಡ ಒಂದು ದೇಶ. ಹೀಗಾಗಿ ಬಜರಂಗದಳವು ಹಿಂದುತ್ವವನ್ನು ಉಳಿಸುವಂತಹ ಕಾರ್ಯ ಮಾಡುತ್ತಿದೆ. ಜೊತೆಗೆ ಇನ್ನೂ ಹಲವು ಹಿಂದೂ ಪರ ಸಂಘಟನೆಗಳು ಕೂಡ ಈ ಕಾರ್ಯ ಮಾಡುತ್ತಿವೆ’ ಎಂದರು.

‘ಆದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಬಜರಂಗದಳ ನಿಷೇಧ ಮಾಡುವ ಕುರಿತು ನೀಡಿರುವ ಹೇಳಿಕೆಯು ಖಂಡನೀಯವಾಗಿದೆ. ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ, ಧರ್ಮವನ್ನು ಉಳಿಸುವ ಕಾರ್ಯವನ್ನು ಮಾಡುವಂತಹ ಸಂದರ್ಭದಲ್ಲಿ ಈ ಹೇಳಿಕೆಯು ವಿಷಾದನೀಯ. ಮರ್ಯಾದ ಪುರುಷೋತ್ತಮ ಶ್ರೀ ರಾಮನ ಭಕ್ತನಾದ ಹನುಮನ ಜನ್ಮವು ನಮ್ಮ ರಾಜ್ಯದ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಆಗಿರುವುದರಿಂದ ಸಾವಿರಾರು ಭಕ್ತರು ಇಲ್ಲಿ ಭೇಟಿ ನೀಡಿ ಪಾವನರಾಗುತ್ತಾರೆ. ಇಂತಹ ಹೇಳಿಕೆಯು ಅವರೆಲ್ಲರ ಮನಸ್ಸಿಗೆ ನೋವುಂಟು ಮಾಡಿದೆ’ ಎಂದ ಅವರು ನಗರದಲ್ಲಿ ಹಾಗೂ ಕ್ಷೇತ್ರದ ಹಲವೆಡೆ ಹನುಮಾನ ಮಂದಿರಗಳಲ್ಲಿ ಬಜರಂಗಿಗಳು ಹನುಮಾನ ಚಾಲಿಸಾ ಪಠಣ ಮಾಡುವದೊಂದಿಗೆ ಖಂಡನೆ ನಡೆಸಲಿದ್ದಾರೆ’ ಎಂದರು.

https://pragati.taskdun.com/rahul-gandhibelagaviyamakanamaradichikkodicampaign/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button