
ಪ್ರಗತಿವಾಹಿನಿ ಸುದ್ದಿ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ). ಕರ್ನಾಟಕ ಪ್ರಾಂತ್ಯಕ್ಕೆ ಹೊಸ ರಾಜ್ಯ ಮಾಧ್ಯಮ ವಕ್ತಾರರನ್ನ ನಿಯೋಜನೆಗೊಳಿಸಿದೆ.
‘ಗೋತ್ರದಿಂದಲ್ಲ ಗುಣದಿಂದ ಬ್ರಾಹ್ಮಣನಾಗುತ್ತಾನೆ’ ಎನ್ನುವಂತೆ ಗುಣಗ್ರಾಹಿಗಳೇ ಸೇರಿ ಸಂಘಟಿಸಿರುವ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘಕ್ಕೆ ‘ಶಶಿಕಿರಣ ದೇಶಪಾಂಡೆ ಅವರನ್ನ’ ಕರ್ನಾಟಕ ರಾಜ್ಯದ ಮಾಧ್ಯಮ ವಕ್ತಾರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್’ ಘೋಷಿಸಿದ್ದಾರೆ.
ದೇಶದ 22 ರಾಜ್ಯಗಳಲ್ಲಿ ಸಂಘ ತನ್ನ ಕಾರ್ಯ ಚಟುವಟಿಕೆಯನ್ನು ಸಕ್ರಿಯಗೊಳಿಸಿದ್ದು, ಬ್ರಾಹ್ಮಣ ಸಮುದಾಯದ ಶ್ರಯೋಭಿವೃದ್ಧಿ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸಂಘಟನೆ ಇದಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಜೋಶಿ ವಿವರಿಸಿದರು.