ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: : ಎನ್.ಆರ್.ಎಲ್.ಎಂ ಯೋಜನೆಯಡಿ ಗುಳೇದಗುಡ್ಡ ತಾಲೂಕಿನ ವಲಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ ಉಣಸಗಿ ಕಳೆದ ಡಿಸೆಂಬರ ಮಾಹೆಯಲ್ಲಿ ಅಕಾಲಿಕವಾಗಿ ಮರಣಹೊಂದಿದ್ದರು, ಮೃತರ ಪತ್ನಿಗೆ ಅಲ್ಪ ಸಹಾಯಧನ ನೀಡುವ ಮೂಲಕ ತಾತ್ಕಾಲಿಕ ಕೆಲಸ ನೀಡುವ ಮೂಲಕ ಜಿ.ಪಂ ಸಿಇಓ ಶಶಿಧರ ಕುರೇರ ಹಾಗೂ ಎನ್.ಆರ್.ಎಲ್.ಎಂ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.
ಡಿ.ಆರ್.ಡಿ.ಎ ವಿಭಾಗದ ಅಧಿಕಾರಿಗಳು, ಎನ್.ಆರ್.ಎಲ್.ಎಂ ಸಿಬ್ಬಂದಿ ವರ್ಗದವರು ಸೇರಿ ಒಟ್ಟು ೭೦ ಸಾವಿರ ರೂ. ಸಂಗ್ರಹಿಸಿ, ಮೃತರ ಪತ್ನಿ ನಾಗಮ್ಮ ಚಂದ್ರಶೇಖರ ಉಣಚಗಿಯವರಿಗೆ ವಿತರಿಸಲಾಯಿತು. ಅಲ್ಲದೇ ನಾಗಮ್ಮ ಚಂದ್ರಶೇಖರ ಉಣಚಗಿ ಅವರಿಗೆ ತಾತ್ಕಾಲಿಕವಾಗಿ ಎನ್.ಆರ್.ಎಲ್.ಎಂ ಯೋಜನೆಯಡಿ ಬಾದಾಮಿ ತಾಲೂಕಿನ ಬಿ.ಆರ್.ಪಿ-ಇಪಿ ಆಗಿ ನೇಮಕಾತಿ ಆದೇಶ ನೀಡಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ