ಶೀಜಾನ್ ಹಲವು ಮಹಿಳೆಯರನ್ನು ಲೈಂಗಿಕ ಅಗತ್ಯಕ್ಕೆ ಬಳಸಿದ್ದಾರೆ; ತುನಿಷಾ ಗೆಳತಿ ಆರೋಪ
December 27, 2022
Less than a minute
ಪ್ರಗತಿವಾಹಿನಿ ಸುದ್ದಿ, ಮುಂಬೈ: ಶೀಜಾನ್ ತನ್ನ ಲೈಂಗಿಕ ಅಗತ್ಯಗಳನ್ನು ಪೂರೈಸಲು ಹಲವಾರು ಮಹಿಳೆಯರನ್ನು ಬಳಸಿಕೊಂಡಿದ್ದು, ಎಲ್ಲರಿಗೂ ಮೋಸ ಮಾಡುತ್ತಿದ್ದುದಾಗಿ ನಟಿ ತುನಿಶಾ ಶರ್ಮಾ ಅವರ ಸ್ನೇಹಿತೆ ರಯ್ಯ ಲಬೀಬ್ ದೂರಿದ್ದಾರೆ.
ತುನಿಶಾ ಅವರ ಸಹನಟನಾಗಿದ್ದ ಶೀಜಾನ್ ಖಾನ್ ಪ್ರೀತಿ ಮತ್ತು ಬದ್ಧತೆ ಭರವಸೆ ನೀಡುವ ಮೂಲಕ ತನ್ನ ಲೈಂಗಿಕ ಅಗತ್ಯಗಳನ್ನು ಪೂರೈಸಿಕೊಂಡು ಹಲವಾರು ಮಹಿಳೆಯರಿಗೆ ಮೋಸ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ.
“ಶೀಜಾನ್ ಸಂಬಂಧಗಳನ್ನು ಬೆಳೆಸಿದ್ದು ಲೈಂಗಿಕತೆಗಾಗಿ ಮಾತ್ರ. ಆತ ಬದ್ಧತೆಯಲ್ಲಿ ಆಸಕ್ತಿ ಹೊಂದಿಲ್ಲ ಅವರು ತುನೀಶಾರೊಂದಿಗೂ ಅದೇ ರೀತಿ ಮಾಡಿ, ನಂತರ ಸಂಬಂಧ ಮುರಿದುಕೊಂಡಿದ್ದಾರೆ,” ಎಂದಿದ್ದಾರೆ.