Karnataka News

ನಿವೃತ್ತ ಪ್ರಾಧ್ಯಾಪಕಿಗೆ ಒಲಿಯಲಿದೆಯೇ ದೆಹಲಿ ಮೇಯರ್ ಸ್ಥಾನ ?

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:

ದೆಹಲಿ ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳ ಬಿಜೆಪಿ ಆಡಳಿತ ಕೊನೆಗೊಳಿಸಿ ಬಹುಮತ ಪಡೆದಿರುವ ಆಮ್ ಆದ್ಮಿ ಪಾರ್ಟಿ ತನ್ನ ಮೇಯರ್ ಅಭ್ಯರ್ಥಿಯಾಗಿ ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ಒಬೆರಾಯ್ ಅವರ ಹೆಸರನ್ನು ಘೋಷಣೆ ಮಾಡಿದೆ. ಹಾಗೂ ಉಪ ಮೇಯರ್ ಆಗಿ ಅಲೆ ಮೊಹಮ್ಮದ್ ಇಕ್ಬಾಲ್ ಅವರ ಹೆಸರನ್ನು ಘೋಷಿಸಿದೆ.

ಶೆಲ್ಲಿ ಒಬೆರಾಯ್ ದೆಹಲಿ ವಿವಿಯ ನಿವೃತ್ತ ಪ್ರಾಧ್ಯಾಪಕಿಯಾಗಿದ್ದು ಪ್ರಸಕ್ತ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಚುನಾಯಿತರಾಗಿದ್ದಾರೆ.

ಉಪ ಮೇಯರ್ ಸ್ಥಾನದ ಅಭ್ಯರ್ಥಿಯಾಗಿರುವ ಆಲೆ ಮೊಹಮ್ಮದ್ ಇಕ್ಬಾಲ್ ಅವರು ದೆಹಲಿಯ ಶಾಸಕರಾಗಿದ್ದ ಶೋಯೆಬ್ ಇಕ್ಬಾಲ್ ಅವರ ಪುತ್ರ. ಅವರು 17 ಸಾವಿರ ಮತಗಳ ಭಾರಿ ಅಂತರದಿಂದ ಜಯ ಸಾಧಿಸಿದ್ದಾರೆ.

 

ಪ್ರಸಕ್ತ ಡಿ.8ರಂದು ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿಯು 134 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಬಿಜೆಪಿ 104 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 9 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಯಿತು.

*ಗಡಿಯಲ್ಲಿ ಭೀಕರ ದುರಂತ; ಕಂದಕಕ್ಕೆ ಉರುಳಿದ ಸೇನಾ ವಾಹನ; 16 ಯೋಧರ ದುರ್ಮರಣ*

https://pragati.taskdun.com/16-army-jawans-killedvehicle-falls-into-gorgesikkimindia-china-border/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button