Belagavi NewsBelgaum NewsKannada NewsKarnataka NewsLatest

*ಸಾರ್ವಜನಿಕರ ಅನುಕೂಲಕ್ಕಾಗಿ ಆಶ್ರಯ ಕೇಂದ್ರಗಳ ಮಾಹಿತಿ*


ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಡೇ-ನಲ್ಮ ಯೋಜನೆ ಅಡಿಯಲ್ಲಿ ೫ ನಿರಾಶ್ರಿತರ ಆಶ್ರಯ ಕೇಂದ್ರಗಳನ್ನು ಜಯ ಭಾರತ ಮಾತೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನಿರ್ವಹಿಸುತ್ತಿದ್ದು, ಸದರಿ ಕೇಂದ್ರಗಳಲ್ಲಿ ನಿರ್ಗತಿಕರು, ವಸತಿರಹಿತರು ವಾಸಿಸಲು ಯಾವುದೇ ಶುಲ್ಕವಿಲ್ಲದೆ ಕೇಂದ್ರಗಳಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆ ಮತ್ತು ಅಶಕ್ತರಿಗೆ ಊಟದ ಸೌಲಭ್ಯವಿರುತ್ತದೆ.


ಅದೇ ರೀತಿಯಲ್ಲಿ ರಾತ್ರಿ ಬೇರೆ ಊರಿಗೆ ಹೋಗಲು ಬಸ್‌ನ ತೊಂದರೆಯಾದವರು ಮತ್ತು ವಾಸಿಸಲು ಮನೆ ಸೌಲಭ್ಯ ಇಲ್ಲದವರು ಇದರ ಸೌಲಭ್ಯ ಪಡೆದುದುಕೊಳ್ಳಬಹುದಾಗಿದೆ.


ನಿರಾಶ್ರಿತರ ವಸತಿರಹಿತ ಆಶ್ರಯಕೇಂದ್ರ (ಪುರುಷ) ಹಳೇ ಪಿ.ಬಿ.ರಸ್ತೆ, ಯಡಿಯುರಪ್ಪ ಮಾರ್ಗ, ಖಾಸಭಾಗ, ಬೆಳಗಾವಿ ಇಲ್ಲಿನ ಸಂಯೋಜಕರು ರಾವಸಾಬ ಶಿರಹಟ್ಟಿ ಮೋ. ಸಂಖ್ಯೆ: ೮೬೧೮೯೪೪೧೧೩ ಸಂಪರ್ಕಿಸಬಹುದಾಗಿದೆ.


ಮಹಾಂತೇಶ ನಗರ ನಿರಾಶ್ರಿತರ ವಸತಿರಹಿತ ಆಶ್ರಯಕೇಂದ್ರ (ಪುರುಷ) ವ್ಯವಸಾಪ್ಫಕರು ಬಾಳೇಶ ಪೂಜಾರಿ ಮೋ. ಸಂಖ್ಯೆ: ೮೯೫೧೧೨೯೪೨೭ ಹಾಗೂ ಮಹಾದ್ವಾರ ರಸ್ತೆ, ಮಹಾವೀರ ಬಿಲ್ದಿಂಗ್ ನಿರಾಶ್ರಿತರ ವಸತಿರಹಿತ ಆಶ್ರಯಕೇಂದ್ರ (ಪುರುಷ) ಇಲ್ಲಿನ ವ್ಯವಸಾಪ್ಫಕರು ಅಭಿಷೇಕ ಮೋ. ಸಂಖ್ಯೆ ೮೦೫೦೨೧೨೨೧೪ಗರ ಸಂಪರ್ಕಿಸಬಹುದಾಗಿದೆ.


ರಾಮತಿರ್ಥ ನಗರದ ಬುಡಾ ಪ್ಲಾಟ ೨೨೦ ನಲ್ಲಿರುವ ನಿರಾಶ್ರಿತರ ವಸತಿರಹಿತ ಆಶ್ರಯಕೇಂದ್ರದ (ಪುರುಷ) ವ್ಯವಸಾಪ್ಫಕರು ಹಣುಮಂತ ಪಾಟೀಲ ಇವರ ಮೋ. ಸಂಖ್ಯೆ ೮೧೯೭೫೭೨೨೦೧ ಹಾಗೂ ಮಾಳ ಮಾರುತಿ ಬಡಾವಣೆಯ ಮಹೇಶ ಪಿ.ಯು ಕಾಲೇಜು ಹಿಂಭಾಗ, ಸೆಕ್ಟರ್ ನಂ.೯ ಇಲ್ಲಿನ ನಿರಾಶ್ರಿತರ ವಸತಿರಹಿತ ಆಶ್ರಯಕೇಂದ್ರದ (ಮಹಿಳಾ&ಮಕ್ಕಳು) ಅನೀತಾ ಆರ್.ಎಸ್ ಇವರ ಮೋ. ಸಂಖ್ಯೆ: ೬೩೬೩೩೩೪೦೪೨ ಇವರಿಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button