Belagavi NewsBelgaum NewsKannada NewsKarnataka NewsLatestPolitics

*ಶಿಗ್ಗಾವಿ​ -ಸವಣೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ​ಹ​ವಾ*  *ಹೋದಲ್ಲೆಲ್ಲಾ ಸೆಲ್ಫಿಗೆ ಮುಗಿಬೀಳುವ ಅಭಿಮಾನಿಗಳು* 

​ * * *ಗೃಹಲಕ್ಷ್ಮೀ ಯೋಜನೆಯ ರೂವಾರಿ ಮನೆಗೆ ಬಂದ ಸಂತಸ* 

*

 ಪ್ರಗತಿವಾಹಿನಿ ಸುದ್ದಿ, *ಶಿಗ್ಗಾವಿ:* ಶಿಗ್ಗಾವಿ​ -ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಅಬ್ಬರದ ಪ್ರಚಾರ ನಡೆಸುವ ಮೂಲಕ ಗಮನ ಸೆಳೆ​ಯುತ್ತಿದ್ದಾರೆ ಮಹಾಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಕಳೆದ ಐದು ದಿನಗಳಿಂದ ಬೀಡು ಬಿಟ್ಟಿರುವ ಸಚಿವರು, ಪ್ರತಿದಿನ ಏಳೆಂಟು ಗ್ರಾಮಗಳಲ್ಲಿ ಪ್ರಚಾರ ​ನಡೆಸುತ್ತಿದ್ದಾರೆ.

ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಚಿವರು ಹೋದ ಕಡೆಯಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯ​ರು​ಸೇರುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ಗೃಹಲಕ್ಷ್ಮೀ ಯೋಜನೆಯ ರೂವಾರಿ ಮಿನಿಸ್ಟರ್ ಬಂದಿದ್ದಾರೆ ಎಂದು ಹೇಳಿ ಆರತಿ ಬೆಳಗಿ ಸ್ವಾಗತಿಸುವುದು ಸಾಮಾನ್ಯವಾಗಿತ್ತು. 

ನಮಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಕೊಡೋ ಮಿನಿಸ್ಟರ್ ಇವರೇ. ಇವರೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್​ ಎನ್ನುತ್ತ ಮಹಿಳೆಯರು, ಮಕ್ಕಳು ಮುಗಿಬೀಳುತ್ತಿದ್ದಾರೆ.  ಗೃಹಲಕ್ಷ್ಮೀ ಯೋಜನೆಯಿಂದ ಬರೋ ಎರಡು ಸಾವಿರ ರೂಪಾಯಿ ನಮಗೆ ಎಷ್ಟೋ ನೆಮ್ಮದಿ ತಂದಿದೆ ​ಎಂದು ಮಹಿಳೆಯರು ಸಚಿವರ ಬಳಿ ಹೇಳಿಕೊ​ಳ್ಳುವುದು ಸಾಮಾನ್ಯವಾಗಿದೆ.‌

 ಕುಂದೂರು ಜಿಲ್ಲಾ ಪಂಚಾಯತ್ ಉಸ್ತುವಾರಿ ವಹಿಸಿಕೊಂಡಿ​ರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕುಂದೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹೋತನಹಳ್ಳಿ ಗ್ರಾಮದಲ್ಲಿ ನವೆಂಬರ್ 6 ರಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು. ಅದೇ ದಿನ ಶಿಗ್ಗಾವಿಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದರು. 

ನವೆಂಬರ್ 7 ರಂದು  ಹನುಮರಹಳ್ಳಿ, ಕಂಕನವಾಡ, ಚಿಕ್ಕ ನೆಲ್ಲೂರು, ಚಾಖಾಪುರ್, ಕುಂದೂರಿನ ಗುಡ್ಡದ ಚನ್ನಾಪುರ, ಹಾವಣಗಿ ಓಣಿ, ನವೆಂಬರ್ 8 ರಂದು ಮೂಕಬಸರೀಕಟ್ಟಿ, ನಾರಾಯಣ್ ಪುರ್, ಸದಾಶಿವ ಪೇಟ, ಬಾಡಾ, ಹಳೇ ಬಂಕಾಪುರ, ನವೆಂಬರ್, ನವೆಂಬರ್ 9 ರಂದು ಕಲ್ಯಾಣ, ಕುರ್ಸಾಪೂರ, ಚಿಕ್ಕ ನೆಲ್ಲೂರು, ಹಿರೇಮಲ್ಲೂರು ಗ್ರಾಮಗಳಲ್ಲಿ ಎರಡರಿಂದ ಮೂರು  ಪ್ರಚಾರ ಸಭೆಗಳನ್ನು ಮಾಡುವ​ ಮೂಲಕ ಮತದಾರರನ್ನು ಹುರಿದುಂಬಿಸಿದರು. ಭಾನುವಾರ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಶಿಗ್ಗಾವಿಯಲ್ಲಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡರು. 

 *ಸೆಲ್ಫಿಗೆ ಮುಗಿಬಿದ್ದ ಜನತೆ*

ಸಚಿವರು ಹೋದ ಕಡೆಯ​ಲ್ಲೆಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿ​ಸುತ್ತಿರುವ ಸಚಿವರು, ಸೆಲ್ಫಿ ಕೇಳಿದ ಮಹಿಳೆಯರಿಗೆ ನಿರಾಸೆ ಮಾ​ಡುತ್ತಿರಲಿಲ್ಲ. ಜೊತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಾ ಇದ್ಯಾ, ನಿಮಗೆ ಉಪಯೋಗ ಆಗುತ್ತಿದ್ಯಾ ಎಂದು ಕೇಳುವ ಮೂಲಕ ಯೋಗಕ್ಷೇಮ ವಿಚಾರಿ​ಸುತ್ತಿದ್ದಾರೆ. 

ಕಾಂಗ್ರೆಸ್ ಪಕ್ಷದ ಇತಿಹಾಸ ಹಾಗೂ ಜನ ಸಾಮಾನ್ಯರಿಗೆ, ಬಡವರಿಗೆ ನೀಡಿರುವ ಕೊಡುಗೆ, ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಮ್ಮ ಭಾಷಣದಲ್ಲಿ ವಿವರಿಸುವ ಮೂಲಕ ಮತದಾರರ ಗಮನ ಸೆಳೆದರು. ಸಚಿವರು ಪ್ರಚಾರ ಸಭೆಗೆ ಬರುವವರೆಗೂ​, ರಾತ್ರಿಯಾದರೂ ಮಹಿಳೆಯರು ಕಾದು‌ ಕುಳಿತಿರುತ್ತಿದ್ದರು. ಜೊತೆಗೆ ಒಂದು ನಿಮಿಷ ನಮ್ ಮನೆಗೆ ಬಂದ್ ಹೋಗ್ರಿ ಎಂದು ಸಚಿವರನ್ನು ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ಗ್ರಾಮಕ್ಕೆ ಬಂದ ಗೃಹಲಕ್ಷ್ಮೀ ಯೋಜನೆಯ ರೂ​ವಾರಿ ಲಕ್ಷ್ಮೀ ಅಕ್ಕನಿಗೆ ಜೈ ಎಂದು ಜೈಕಾರ ಹಾಕುವ ಮೂಲಕ ಸಚಿವರನ್ನು ಬರಮಾಡಿಕೊಳ್ಳುತ್ತಿದ್ದರು. 

ವರಿಷ್ಠರು ನೀಡಿದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿ​ಸುತ್ತಿರುವ ಸಚಿವರು, ಮತದಾರರನ್ನು ಅದರಲ್ಲೂ ಮಹಿಳೆಯರ ಗಮನಸೆಳೆಯುವಲ್ಲಿ ಯಶಸ್ವಿಯಾದರು.​ ಜನರು ಅವರಿಗೆ ತೋರುತ್ತಿರುವ ಪ್ರೀತಿ ಯಾವ ಫಿಲ್ಮ್ ಸ್ಟಾರ್ ಗಳಿಗೂ ಕಡಿಮೆ ಇಲ್ಲ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button