Latest

ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಬೃಹತ್ ಜವಳಿ ಪಾರ್ಕ್

ಪ್ರಗತಿವಾಹಿನಿ ಸುದ್ದಿ; ಶಿಗ್ಗಾವಿ: ಇಂದು ಸ್ವಕ್ಷೇತ್ರ ಶಿಗ್ಗಾವಿ, ಸವಣೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದು, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಆಯೋಜಿಸಿರುವ ಟೆಕ್ಸ್‌ಟೈಲ್ ಪಾರ್ಕ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅದರ ಜತೆಗೆ ಟೆಕ್ಸ್ ಪೋರ್ಟ್ ಸಿದ್ಧ ಉಡುಪು ಘಟಕದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕೈಮಗ್ಗ ಹಾಗೂ ಜವಳಿ ಇಲಾಖೆಯಿಂದ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಂಕರ್ ಪ್ರವರ್ತಕರ ಮಾದರಿಯಲ್ಲಿ ೫೯.೩೪ ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಾಣ ಆಗುತ್ತಿದೆ.

Home add -Advt

ಸಿದ್ಧ ಉಡುಪು ಘಟಕಗಳ ಹಾಗೂ ಜವಳಿ ಘಟಕಗಳ ಸ್ಥಾಪನೆಗೆ ಮೂರು ಹಂತಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಮೊದಲ ಹಂತದಲ್ಲಿ 25 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಆಂಕರ್ ಪ್ರವರ್ತಕರಾದ ಮೆ ಟೆಕ್ಸ್ ಪೋರ್ಟ್ ಪ್ರೈ ಲಿ ಕಂಪನಿ 42 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ದ ಉಡುಪು ಘಟಕ ನಿರ್ಮಾಣ ಮಾಡುತ್ತಿದೆ. ಇದರಿಂದ ಒಟ್ಟು 3000 ಜನರಿಗೆ ಉದ್ಯೋಗ ಲಭಿಸಲಿದೆ.
ಕಾಂಗ್ರೆಸ್ ಶಾಸಕನ ವಿರುದ್ಧ 30% ಕಮಿಷನ್ ಆರೋಪ

Related Articles

Back to top button