ಪ್ರಗತಿವಾಹಿನಿ ಸುದ್ದಿ; ಹಾವೇರಿ: ಮಹಿಳೆಯೊಬ್ಬರು ತನ್ನ ಪತಿಯನ್ನೇ ಹತ್ಯೆ ಮಾಡಿ ಆತ ಕೆಲಸಕ್ಕೆ ಹೋಗಿದ್ದಾನೆ ಎಂದು ಎರಡು ತಿಂಗಳ ಕಾಲ ನಾಟಕವಾಡಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ.
ಶೀಲವ್ವ ಎಂಬ ಮಹಿಳೆಗೆ ಅದಾಗಲೇ ಎರಡು ಮಕ್ಕಳಿದ್ದು, ಆದಾಗ್ಯೂ ಪತಿ ಸಕ್ರಪ್ಪನನ್ನು ಬಿಟ್ಟು ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಪತಿಯನ್ನೇ ಹತ್ಯೆಗೈದಿದ್ದಾಳೆ.
ಶಿಗ್ಗಾವಿ ಬಳಿಯ ಅಡವಿ ಸೋಮಾಪುರ ಬಳಿಯ ಹಳ್ಳದಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅ.25ರಂದು ಮೃತದೇಹವೊಂದು ಪತ್ತೆಯಾಗಿತ್ತು. ತಡಸ ಹಾಗೂ ಶಿಗ್ಗಾವಿ ವೃತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
2 ತಿಂಗಳಾದರೂ ಮೃತ ವ್ಯಕ್ತಿ ಸುಳಿವು ಸಿಕ್ಕಿರಲಿಲ್ಲ. ಲಂಬಾಣಿ ತಾಂಡಾ ಜನರು ದುಡಿಯಲು ಹೊರಗಡೆ ಹೋದರೂ ದೀಪಾವಳಿಯಲ್ಲಿ ವಾಪಸ್ ಊರಿಗೆ ಬರುತ್ತಾರೆ. ಆದರೆ 40 ವರ್ಷದ ಸಕ್ರಪ್ಪ ಲಮಾಣಿ ದೀಪಾವಳಿಗೂ ಊರಿಗೆ ಬಂದಿರಲಿಲ್ಲ. ಸಕ್ರಪ್ಪ ಪತ್ನಿ ಶೀಲವ್ವಳ ಬಗ್ಗೆ ಅನುಮಾನಗೊಂಡ ಸಂಬಂಧಿಕರು ಸಕ್ರಪ್ಪ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಪೊಲೀಸರು ಅಡವಿ ಸೋಮಾಪುರ ಬಳಿ ಸಿಕ್ಕ ಮೃತದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಗುರುತು ಸಿಗುತ್ತಿರಲಿಲ್ಲ. ಕಾಲಿನ ಸ್ವಲ್ಪ ಭಾಗ ಮಾತ್ರ ಹಾಗೆಯೇ ಇತ್ತು ಇದನ್ನು ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಸಂಬಂಧಿಕರಿಗೆ ತೋರಿಸಿದ್ದರು. ಕಾಲಿನ ಮೇಲೆ ಗಾಯದ ಗುರುತು ಕೂಡ ಇತ್ತು. ಇದು ಸಕ್ರಪ್ಪನದ್ದೇ ಕಾಲುಗಳು ಎಂದು ಸಂಬಂಧಿಕರು ಗುರುತಿಸಿದ್ದರು. ಪೂರ್ವನಿಯೋಜಿತ ಕೊಲೆ ಎಂಬುದನ್ನು ಕಂಡು ಹಿಡಿದ ಪೊಲೀಸರು ಶೀಲವಳ್ಳನ್ನು ವಿಚಾರಣೆ ನಡೆಸಿದ್ದಾರೆ.
ಶೀಲವ್ವ ಹಾಗೂ ಸಕ್ರಪ್ಪ ವಿವಾಹವಾಗಿ ಹಲವು ವರ್ಷಗಳಾಗಿದ್ದು ಇಬ್ಬರು ಮಕ್ಕಳಿದ್ದರು. ಆದರೂ ಶೀಲವ್ವಳಿಗೆ ಶಿಗ್ಗಾವಿಯ ನೀರಲಗಿ ಗ್ರಾಮದ ಸುರೇಶ್ ಮಿರ್ಚಿ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಆತನಿಗೂ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಅಲ್ಲದೇ ಸಕ್ರಪ್ಪನಿಗೆ ಕುಡಿತದ ಚಟವಿತ್ತು ಇದರಿಂದ ಶೀಲವ್ವ ಬೇಸತ್ತಿದ್ದಳು. ಪತ್ನಿ ವಿಚಾರ ಗೊತ್ತಾಗಿ ಸಕ್ರಪ್ಪ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಸೀಲವ್ವ, ಸುರೇಶನ ಜೊತೆ ಸೇರಿ ಪತಿಯನ್ನೇ ಮುಗಿಸುವ ಪ್ಲಾನ್ ಮಾಡಿದ್ದಳು.
ನಾಲ್ವರು ಸೇರಿ ಸಕ್ರಪ್ಪನಿಗೆ ಡಾಬಾಬಳಿ ಕರೆದೊಯ್ದು ಕಂಠಪೂರ್ತಿ ಕುಡಿಸಿ, ಭರ್ಜರಿ ಊಟ ಮಾಡಿಸಿ ಪತಿಗೆ ಕಂಠಪೂರ್ತಿ ಕುಡಿಸಿ ಅಡವಿಸೋಮಾಪುರ ಬಳಿ ಹಳ್ಳದ ಬಳಿ ಕರೆದೊಯ್ದು ಸುರೇಶ ತಂದಿದ್ದ ಕೊಡಲಿಯಿಂದ ಸಕ್ರಪ್ಪನ ಮೇಲೆ ಮಾರಣಾಮ್ತಿಕ ಹಲ್ಲೆ ನಡೆಸಿದ್ದಾರೆ. ಸಕ್ರಪ್ಪ ಒಂದೇ ಏಟಿಗೆ ಸಾವನ್ನಪ್ಪಿದ್ದಾನೆ. ಅ.23ರಂದು ಮೃತದೇಹ ಪೊದೆಯಲ್ಲಿಯೇ ಮುಚ್ಚಿಟ್ಟಿದ್ದ ಕಿರಾತಕರು ಬಳಿಕ ಆ.24ರಂದು ಮತ್ತೆ ಸ್ಥಳಕ್ಕೆ ಹೋಗಿ ಹಳ್ಳದ ಬಳಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಇದೀಗ ಪ್ರಕರಣ ಸಂಬಂಧ ಶೀಲವ್ವ, ಸುರೇಶ, ಹಾಗೂ ಹತ್ಯೆಗೆ ಸಹಾಯ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಸುರೇಶನ ಸ್ನೇಹಿತರಾದ ಚಂದ್ರಪ್ಪ, ವಿನಾಯಕ, ಸತ್ಯಪ್ಪ, ಗೋದಪ್ಪ, ನಾಗಪ್ಪ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ.
ಬಿಜೆಪಿಯವರು ಯಾರಿಗೆಲ್ಲ ಕಿರುಕುಳ ನೀಡುತ್ತಾರೆ ಗೊತ್ತಾ?- ಡಿ.ಕೆ.ಶಿವಕುಮಾರ ಹೇಳಿಕೆ ನೋಡಿ
https://pragati.taskdun.com/latest/at-belgaum-airport-d-k-sivakumars-media-response/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ